ಸಿದ್ದರಾಮಯ್ಯನವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ: ಆರ್.ಬಿ. ತಿಮ್ಮಾಪೂರ

ಬಾಗಲಕೋಟೆಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನ ಬಳಸಿದ ಸಂಸದ ಅನಂತಕುಮಾರ್ಹೆಗಡೆ ಕೂಡಲೇ ಸಿಎಂ ಕ್ಷಮೆ ಯಾಚಿಸಬೇಕು ಎಂದು ಸಚಿವ ಆರ್.ಬಿ. ತಿಮ್ಮಾಪೂರ ಆಗ್ರಹಿಸಿದರು. ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ. ಅದಕ್ಕೆ ಗೌರವ ಕೊಡ ಬೇಕಾಗಿರೋದು ಎಲ್ಲರ ಧರ್ಮ.

 ಅನಂತಕುಮಾರ್ಹೆಗಡೆ ಯಾವುದೇ ಪಕ್ಷದಿಂದ ಗೆದ್ದಿರಬಹುದು. ರೀತಿಯ ಮಾತು ಯಾರಿಗೂ ಶೋಭೆಯಲ್ಲ. ಅವರು ಹಿಂದೆ ಡಾ.ಅಂಬೇಡ್ಕರ್ಬಗ್ಗೆಯೂ ಅವಹೇಳನಕಾರಿ ಮಾತನಾಡಿದ್ದಾರೆ. ಹಿಂದು ಧರ್ಮಕ್ಕೆ ಅವಹೇಳನ ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುತ್ತಾರೆ ಸಂವಿಧಾನ ಇವನೊಬ್ಬನಿಗೆ ಬರೆದು ಕೊಟ್ಟಿದ್ದಾರಾ ಎಂದು ಟೀಕಿಸಿದರು.

ಬೇಕಾದರೆ ಮೋದಿ ಸಾಹೇಬರು ಹೇಳಲಿ ? ಆಗ ಜನ ಕೇಳುತ್ತಾರೆ. ಯಾವನೋ ಎಂಪಿ ಹೇಳ್ತಾನೆ ಎಂದು ಏನು ಮಾಡಲು ಆಗಲ್ಲ. ಅನಂತಕುಮಾರ್‌ ಗೆ ಟಿಕೆಟ್ ಸಿಗಲ್ಲ ಎಂಬ ಸೂಚನೆ ಸಿಕ್ಕಿದೆ. ಅದಕ್ಕೆ ರೀತಿ ಮಾತನಾಡುತ್ತಿದ್ದಾರೆ. ರೀತಿ ಮಾತನಾಡಿದರೆ ಟಿಕೆಟ್ ಸಿಗುತ್ತದೆ ಎಂಬ ಆಸೆಗಾಗಿ ಮಾತನಾಡುತ್ತಾರೆ. ಟಿಕೆಟ್‌ ಗೋಸ್ಕರ, ಅಧಿಕಾರಕ್ಕಾಗಿ ದೇವರ ದುರ್ಬಳಕೆ, ಧರ್ಮ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರು ಎಂದಾದರೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ ? ಯುವಕರು ಉದ್ಯೋಗ ಕೊಡಿ ಎನ್ನುತ್ತಿದ್ದಾರೆ ಇವರು ಕೊಡುತ್ತಿಲ್ಲ. ನಾವು ಯುವನಿಧಿ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದರು

 

Loading

Leave a Reply

Your email address will not be published. Required fields are marked *