ಶಿವಮೊಗ್ಗ: ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿಯೊಬ್ಬಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಾಲೂರು ಕೊಳಿಗೆ ಸಮೀಪ ದಾಸನಕೊಡಿಗೆಯಲ್ಲಿ ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲ್ಲೂಕು ನಾಲೂರು ಕೊಳಿಗೆ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದ್ದಿದು. ಮಂಗಳವಾರ ರಾತ್ರಿ ಘಟನೆ ಆಗಿಬಹುದು ಎನ್ನಲಾಗ್ತಿದೆ. ಮೃತ ಹುಡುಗಿ ಹೆಸರು ಶಮಿತಾ. ವಯಸ್ಸು 24 ಇವರ ಪತಿ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ರಾತ್ರಿ ಪಾಳಿ ಇದ್ದಿದ್ದರಿಂದ ಕೆಲಸಕ್ಕೆ ಹೋಗಿದ್ದಾರೆ.
ಆ ಬಳಿಕ ಶಮಿತ ಮನೆಯ ಉಪ್ಪರಿಗೆ ಮೇಲಿದ್ದ ಕೋಣೆಗೆ ಹೋಗಿ ಮಲಗಿದ್ದಾರೆ. ಬೆಳಗ್ಗೆ ಎಷ್ಟೊತ್ತಾದರೂ ರೂಮಿನಿಂದ ಹೊರಕ್ಕೆ ಬರದ ಕಾರಣ ಮನೆಯವರು ಬಾಗಿಲು ತಟ್ಟಿದ್ದಾರೆ. ಅನುಮಾನಗೊಂಡು ಕಿಟಕಿಯಲ್ಲಿ ಇಣಕಿದ್ದಾರೆ. ಆಗ ಶಮಿತರಾ ಮೃತದೇಹ ಕಂಡುಬಂದಿದೆ.
ಪೊಲೀಸರಿಗೆ ವಿಷಯ ಮುಟ್ಟಿಸಿ ಸ್ಥಳೀಯರು ಮನೆಯ ಬಳಿ ಜಮಾಯಿಸಿದ್ದರು. ಮೃತಳ ಫೋಷಕರು ಬರುವರೆಗೂ ಕೋಣೆಯ ಬಾಗಿಲು ತೆಗೆದಿರಲಿಲ್ಲ. ಅಂತಿಮವಾಗಿ ಪಂಚರು ಹಾಗೂ ಪೋಷಕರ ಸಮ್ಮುಖದಲ್ಲಿ ಬಾಗಿಲು ಒಡೆದು ಶಮಿತಾರ ಮೃತದೇಹ ಸ್ಥಳಾಂತರ ಮಾಡಲಾಯ್ತು.
ಮೂಲಗಳ ಪ್ರಕಾರ, ಶಮಿತಾ ಸಾವನ್ನಪ್ಪಿರುವ ಸ್ಥಳದಲ್ಲಿ ಡೆತ್ ನೋಟ್ ಸಹ ಸಿಕ್ಕಿದ್ದು ಅನಾರೋಗ್ಯದ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾಗೆ ಬರೆದಿದ್ದಾರೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.