Wissam al-Tawil: ಇಸ್ರೇಲ್‌ ಸೈನಿಕರು ನಡೆಸಿದ ದಾಳಿಯಲ್ಲಿ ಹಿರಿಯ ಕಮಾಂಡರ್‌ ಸಾವು

ಟೆಲ್ಅವೀವ್:‌ ದಕ್ಷಿಣ ಲೆಬನಾನ್‌ನಲ್ಲಿ (South Lebanon) ಇಸ್ರೇಲ್‌ (Isreal) ಸೈನಿಕರು ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಗಣ್ಯ ರಾದ್ವಾನ್ ಪಡೆಯ ಹಿರಿಯ ಕಮಾಂಡರ್‌ ಒಬ್ಬ ಸಾವನ್ನಪ್ಪಿರುವುದಾಗಿ ಭದ್ರತಾ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.

ಮೃತನನ್ನು ವಿಸ್ಸಾಮ್ ಅಲ್-ತವಿಲ್ (Wissam al-Tawil) ಎಂದು ಗುರುತಿಸಲಾಗಿದೆ. ಈತ ರಾದ್ವಾನ್ ಪಡೆಯೊಳಗಿನ ಘಟಕದ ಉಪ ಮುಖ್ಯಸ್ಥ ಎನ್ನಲಾಗಿದೆ. ಲೆಬನಾನಿನ ಮಜ್ದಾಲ್ ಸೆಲ್ಮ್ ಗ್ರಾಮದ ಮೇಲಿನ ದಾಳಿಯಲ್ಲಿ ವಿಸ್ಸಾಮ್ ಕಾರಿಗೆ ಡಿಕ್ಕಿ ಹೊಡೆದಾಗ‌ ವಿಸ್ಸಾಮ್‌ ಮತ್ತು ಇನ್ನೊಬ್ಬ ಹೆಜ್ಬೊಲ್ಲಾ ಹೋರಾಟಗಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಈ ಮೂಲಕ ಸದ್ಯದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯಗಳು ಹೆಚ್ಚಿದೆ ಎಂದು ಭದ್ರತಾ ಮೂಲವೊಂದು ಆತಂಕ ವ್ಯಕ್ತಪಡಿಸಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ‌ ದಕ್ಷಿಣ ಲೆಬನಾನ್‌ನಲ್ಲಿ 130 ಕ್ಕೂ ಹೆಚ್ಚು ಹೆಜ್ಬೊಲ್ಲಾ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ. ಇತ್ತ ಸಿರಿಯಾದಲ್ಲಿ 19 ಮಂದಿ ಮೃತಪಟ್ಟಿದ್ದಾರೆ.

ಲೆಬನಾನ್‌ನ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸದಂತೆ ಕಳೆದ ವಾರ ಹೆಜ್ಬೊಲ್ಲಾಹ್‌ನ ಪ್ರಧಾನ ಕಾರ್ಯದರ್ಶಿ ಸಯ್ಯದ್ ಹಸನ್ ನಸ್ರಲ್ಲಾ ಇಸ್ರೇಲ್‌ಗೆ ಎಚ್ಚರಿಕೆ ನೀಡಿದರು. ಯಾರು ನಮ್ಮೊಂದಿಗೆ ಯುದ್ಧದ ಬಗ್ಗೆ ಯೋಚಿಸುತ್ತಾನೋ ಅವನು ಮುಂದೆ ವಿಷಾದ ವ್ಯಕ್ತಪಡಿಸುತ್ತಾನೆ ಎಂಬುದಾಗಿ ತಿಳಿಸಿದ್ದರು.

Loading

Leave a Reply

Your email address will not be published. Required fields are marked *