ರಾಮಮಂದಿರ ನಿರ್ಮಾಣದಿಂದ 74% ಮುಸ್ಲಿಮರು ಸಂತಸಗೊಂಡಿದ್ದಾರೆ: ಮುಸ್ಲಿಂ ರಾಷ್ಟ್ರೀಯ ಮಂಚ್

ವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣದಿಂದ 74% ಮುಸ್ಲಿಮರು ಸಂತಸಗೊಂಡಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾರತದ ಅತ್ಯಂತ ಯಶಸ್ವಿ ಪ್ರಧಾನಿ ಎಂದು ಅವರೆಲ್ಲ ನಂಬಿದ್ದಾರೆ ಎಂದು ರಾಷ್ಟ್ರೀಯವಾದಿ ಮುಸ್ಲಿಂ ಸಂಘಟನೆ `ಮುಸ್ಲಿಂ ರಾಷ್ಟ್ರೀಯ ಮಂಚ್’ (Muslim Rashtriya Manch) ಹೇಳಿಕೊಂಡಿದೆ.

 

ಗುಜರಾತ್‍ನ ಸ್ವತಂತ್ರ ಸಂಶೋಧನಾ ಮತ್ತು ಸಮೀಕ್ಷಾ ಸಂಸ್ಥೆ `ಆಯುರ್ವೇದ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್’ ಮೂಲಕ ದೇಶದ ಮುಸ್ಲಿಮರ ಸಮೀಕ್ಷೆ ನಡೆಸಿ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಯಲ್ಲಿ ಎಂಆರ್‍ಎಂ ತಿಳಿಸಿದೆ. ಸಮೀಕ್ಷಾ ವರದಿಯಲ್ಲಿ, ಭಗವಾನ್ ರಾಮನು ಜನಮನದಲ್ಲಿ ನೆಲೆಸಿದ್ದಾನೆ.

ಮೋದಿ ಭಾರತದ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದು ಅವರ ಮಾತುಗಳನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತು ಕೇಳುತ್ತದೆ ಮತ್ತು ಸ್ವೀಕರಿಸುತ್ತದೆ. ಅಲ್ಲದೇ ಅಸಂಖ್ಯಾತ ಮುಸ್ಲಿಮರು ಇಸ್ಲಾಮ್ ಹೆಸರಿನಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗೆ ಪ್ರಯತ್ನಿಸುತ್ತಿರುವ ಉಲೇಮಾಗಳು, ಮೌಲಾನಾಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎಂಆರ್‍ಎಂ ಹೇಳಿಕೊಂಡಿದೆ.

Loading

Leave a Reply

Your email address will not be published. Required fields are marked *