ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವ್ಯವಸ್ಥಿತವಾಗಿ ಜಾರಿಗೆ ತಂದು ಕಠಿಣಗೊಳಿಸಬೇಕಂತ ರಾಜ್ಯ ಸರ್ಕಾರ ಮುಂದಾಗಿದೆ.. ಸರ್ಕಾರ ಬಂದು 8 ತಿಂಗಳ ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ವಾರ್ಷಿಕ ಸಮಾವೇಶ ಸಭೆ ನಡೆಸಿದ್ರು..
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಠಿಣ ಕ್ರಮ ಜಾರಿಗೊಳಿಸೋದರ ಜೊತೆಗೆ ಪೊಲೀಸರಿಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ಖಡಕ್ ಸೂಚನೆಯನ್ನ ರವಾನಿಸಿದ್ರು ಸಿಎಂ.. ಹಾಗಾದ್ರೆ ಇವತ್ತಿನ ಪೊಲಿಸ್ ಹಿರಿಯ ಅಧಿಕಾರಿಗಳೊಂದಿಗೆ ಯಾವೆಲ್ಲಾ ವಿಚಾರಗಳನ್ನ ಚರ್ಚೆ ಮಾಡಲಾಯ್ತು .. ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆ ಏನು ಅಂತೀರಾ ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಎಸ್… ರಾಜ್ಯದಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಸೇರಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿಚ ಪರಮೇಶ್ವರ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಯ್ತು..ನೃಪತುಂಗ ರಸ್ತೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಜಿಪಿ, ಎಡಿಜಿಪಿಗಳು, ಐಜಿಗಳು, ಡಿಐಜಿಗಳು, ಎಲ್ಲಾ ಎಸ್ ಪಿ,ಡಿಸಿಪಿಗಳು ಭಾಗಿಯಾಗಿದ್ರು.. ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಷ ಸಭೆ ನಡೆಸೋದಕ್ಕು ಮೊದಲು ವಾರ್ಷಿಕ ಸಮಾವೇಶ ಸಭೆಯಲ್ಲಿ ರಾಜ್ಯದ ತನಿಖಾ ವಿಶೇಷತೆಗಳ ಪ್ರದರ್ಶನ ಮಾಡಲಾಯ್ತು.. ರಾಜ್ಯದ ಬಾಂಬ್ ನಿಷ್ಕ್ರಿಯ ದಳ , ಗರುಡ ಪಡೆ, ಎಫ್ ಎಸ್ ಎಲ್ ಹಾಗೂ ಮೊಬೈಲ್ ಕಮಾಂಡ್ ಕಂಟ್ರೋ ಸೆಂಟರ್ ಪ್ರದರ್ಶನ,ಅದೇ ರೀತಿ ಪೊಲೀಸರು ವಶಕ್ಕೆ ಪಡೆದಿರುವ ಹಲವು ಮಾದರಿಯ ಮಾದಕ ವಸ್ತುಗಳ ಪ್ರದರ್ಶನ ಡ್ರಗ್ ಮುಕ್ತ ಕರ್ನಾಟಕ ಜಾಗೃತಿ ಕಾರ್ಯಕ್ರಮದ ಬಗ್ಗೆ ಪ್ರದರ್ಶನವನ್ನ ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದ್ರು..