ಬೆಂಗಳೂರು: ಪಕ್ಷದಲ್ಲಿ ಕಲೆವರ ನಡೆಗೆ ಅಸಮಾಧಾನಗೊಂಡಿದ್ದ ವಿ ಸೋಮಣ್ಣ ಇದೀಗ ಹೈಕಮಾಂಡ್ ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್ ಸಹ ಸೋಮಣ್ಣ ಕೋಪವನ್ನು ಶಮನ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಜತೆ ಶನಿವಾರವಷ್ಟೇ ಮಾತುಕತೆ ನಡೆಸಿ ಬಂದಿರುವ ಹಿರಿಯ ನಾಯಕ ವಿ ಸೋಮಣ್ಣ ,
ಇದೀಗ ಭೇಟಿ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸೋಮಣ್ಣ ಹಿರಿಯರು, ಪಕ್ಷಕ್ಕೆ ಅವರದ್ದೇ ಆದ ಕೊಡುಗೆ ಇದೆ. ಗೆಲ್ಲುವ ಭರವಸೆ ಮೇಲೆ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಸೋಮಣ್ಣ ಪರಾಭವ ಆಗಿದ್ದಕ್ಕೆ ನಮಗೂ ನೋವು ಇದೆ ಎಂದಿದ್ದಾರೆ.