ಪ್ರೈಮರಿ ಸ್ಕೂಲ್ ಸಹ ಶಿಕ್ಷಕರಿಗೆ ಗುಡ್ ನ್ಯೂಸ್ – ಮುಖ್ಯ ಶಿಕ್ಷಕರ “ಬಡ್ತಿ” ಪ್ರಕ್ರಿಯೆ ಆರಂಭ!

ಬೆಂಗಳೂರು:- ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮುಖ್ಯ ಶಿಕ್ಷಕರ ʻಬಡ್ತಿʼ ಪ್ರಕ್ರಿಯೆ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆ 2023-24ನೇ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ಬಡ್ತಿ ಪ್ರಕ್ರಿಯೆ ಚಾಲನೆ ನೀಡುವಂತೆ ಶಾಲಾ ಶಿಕ್ಷಣ ಸೂಚನೆ ನೀಡಿದೆ

ಬಡ್ತಿ ಪ್ರಕ್ರಿಯೆ ಕೌನ್ಸೆಲಿಂಗ್ ಕೈಗೊಳ್ಳುವಾಗ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದೆ.

ಇದರ ಜತೆಗೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪೂರಕವಾದ ವೇಳಾಪಟ್ಟಿಯನ್ನು ರೂಪಿಸಿದೆ. ಜ.12ರಂದು ಬಡ್ತಿಗೆ ಅರ್ಹರಿರುವ ಶಿಕ್ಷಕರ ತಾತ್ಕಾಲಿಕ ಅಂತಿಮ ಅದ್ಯತಾ ಪಟ್ಟಿ ಪ್ರಕಟಣೆ ಮಾಡಲಿದೆ. ಜ.30ರಂದು ‘ಬಿ’ ವಲಯದಿಂದ ‘ಎ’ ವಲಯಕ್ಕೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಸಂಪೂರ್ಣ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌
ನಲ್ಲಿ ನೋಡಬಹುದಾಗಿದೆ.

Loading

Leave a Reply

Your email address will not be published. Required fields are marked *