ರೈತರಿಗೆ 2 ಸಾವಿರ ರೂ, ಸಿಗಬೇಕೆಂದರೆ ಆಧಾರ್‌ ಲಿಂಕ್‌ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಬರಗಾಲದ ತಾತ್ಕಾಲಿಕ ರಿಲೀಫ್‌ 2000 ಸಾವಿರಕ್ಕಾಗಿ ರೈತರು ಕಾಯುತ್ತಿದ್ದಾರೆ.ಈ ನಡುವೆ ರೈತರು 2000 ಸಾವಿರ ಪಡೆಯಲು (Aadhaar card) ಆಧಾರ್‌ ಲಿಂಕ್‌ ಮಾಡಿಸಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ವಿವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬರ ಪರಿಹಾರದ ಹಣ ನೀಡುವುದಕ್ಕೆ ಸ್ಟಾರ್ಟ್‌ ಮಾಡ್ತಿದ್ದೇವೆ.ರೈತರ ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿ ಕೊಡ್ತೀವಿ ಎಂದಿದ್ದಾರೆ. ರೈತರು ಆಧಾರ್ ಲಿಂಕ್ ಮಾಡಿದ ಮೇಲೆರೈತರಿಗೆ ಬರ ಪರಿಹಾರದ 2000 ಸಾವಿರ ರೂಪಾಯಿ ಅವರ ಬ್ಯಾಂಕ್‌ ಅಕೌಂಟ್‌ ಖಾತೆಗೆ ಬೀಳಲಿದೆ.ಆಧಾರ್ ಲಿಂಕ್ ಮಾಡದ ರೈತರು ಕೂಡಲೇ ಆಧಾರ್‌ ಲಿಂಕ್ ಮಾಡಿಸಬೇಕು ಎಂದಿದ್ದಾರೆ.

Loading

Leave a Reply

Your email address will not be published. Required fields are marked *