ಕೋಮು ಗಲಭೆ ಎಬ್ಬಿಸೋಕೆ BJP ಬೆಂಬಲ ಕೊಟ್ಟಿದೆ: ಬಿ.ಕೆ ಹರಿಪ್ರಸಾದ್

ಬೆಂಗಳೂರು: ಅಯೋಧ್ಯೆಗೆ ಹೋಗೋರಿಗೆ ರಕ್ಷಣೆ ಕೊಡ್ಬೇಕು, ಇಲ್ಲದಿದ್ದರೆ ಗೋಧ್ರಾ ಮಾದರಿ ಘಟನೆ ಆಗಬಹುದು ಎಂದಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad), ಮತ್ತೆ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ರಾಷ್ಟ್ರ ರಕ್ಷಣಾ ಪಡೆ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಪುನಿತ್ ಕೆರೆಹಳ್ಳಿ ಹಾಕಿದ್ದಾರೆ ಎನ್ನಲಾದ ಪೋಸ್ಟ್ ಹಂಚಿಕೊಂಡಿದ್ದಾರೆ.

ಅದರಲ್ಲಿ, ಕರ್ನಾಟಕದಲ್ಲಿ ಕೋಮು ಗಲಭೆ ಎಬ್ಬಿಸೋಕೆ ಬಿಜೆಪಿ (BJP) ನಮಗೆ ಬೆಂಬಲ ಕೊಟ್ಟಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ರೆಡಿ ಆಗಿ ಇರಿ. ಎಲ್ಲಿ ಏನು ಮಾಡ್ಬೇಕು ಅನ್ನೋದನ್ನು ನಾವು ಈ ಗ್ರೂಪ್ ಮೂಲಕ ಮಾಹಿತಿ ಕೊಡ್ತೀವಿ. 2024ಕ್ಕೆ ಮತ್ತೊಮ್ಮೆ ಮೋದಿ ಎಂಬ ಬರಹವಿದೆ. ಇದನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ. ಕೋಮುಗಲಭೆಗೆ (Communal Riots) ಬಿಜೆಪಿ ತನ್ನ ಸಹೋದರ ಸಂಘಟನೆಗಳನ್ನು ರೆಡಿ ಮಾಡ್ತಿರೋದು ಇದರಿಂದ ಗೊತ್ತಾಗುತ್ತೆ.

ರೌಡಿಶೀಟರ್ ಪುನಿತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿ ಕೋಮುಗಲಭೆ ನಡೆಸುವ ಫತ್ವಾ ನೀಡಿದೆ. ವಿಶ್ವಗುರುವನ್ನು ಮತ್ತೆ ಪ್ರಧಾನಿ ಮಾಡಲು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ. ಸಮಾಜಘಾತುಕರಿಗೆ ಇಡೀ ಬಿಜೆಪಿ ಬೆಂಬಲ ನೀಡ್ತಿದೆ ಅನ್ನೋದು ಜಗಜ್ಜಾಹೀರಾಗ್ತಿದೆ. ಕೂಡಲೇ ಸರ್ಕಾರ ಇಂತಹ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಇಂತಹವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.

Loading

Leave a Reply

Your email address will not be published. Required fields are marked *