ಭೂಕಂಪನಕ್ಕೆ 13 ಮಂದಿ ದುರ್ಮರಣ : ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ!

ಟೋಕಿಯೊ: ಒಂದೇ ದಿನ 155 ಬಾರಿ ಭೂಕಂಪ ಸಂಭವಿಸಿದ ಪರಿಣಾಮ ಜಪಾನ್‌ನಲ್ಲಿ (Japan Earthquakes) 13 ಮಂದಿ ಸಾವಿಗೀಡಾಗಿದ್ದಾರೆ. ಹೊಸ ವರ್ಷದಂದೇ ಭೂಕಂಪ ಸಂಭವಿಸಿ ಅಪಾರ ಸಾವು-ನೋವಿಗೆ ಕಾರಣವಾಗಿದೆ.

ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪವು ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು.

ಭೂಕಂಪದ ತೀವ್ರತೆಗೆ ಕಟ್ಟಡಗಳು ನೆಲಕ್ಕುರುಳಿವೆ, ಪ್ರಮುಖ ಬಂದರು ಬೆಂಕಿ ಅವಘಡಕ್ಕೆ ಕಾರಣವಾಯಿತು, ರಸ್ತೆಗಳು ಬಿರುಕು ಬಿಟ್ಟಿವೆ

ಜಪಾನ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಹಲವಾರು ಸಾವುನೋವುಗಳು, ಕಟ್ಟಡ ಕುಸಿತಗಳು ಮತ್ತು ಬೆಂಕಿ ಸೇರಿದಂತೆ ಬಹಳ ವ್ಯಾಪಕ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಸಭೆಯ ಬಳಿಕ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ತಿಳಿಸಿದ್ದಾರೆ.

ವಾಜಿಮಾ ಬಂದರಿನಲ್ಲಿ ಏಳು ಮಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏರಿಯಲ್ ನ್ಯೂಸ್ ಫೂಟೇಜ್ ಬಂದರಿನಲ್ಲಿ ಭೂಕಂಪದಿಂದ ಬೆಂಕಿ ಅವಘಡ ಸಂಭವಿಸಿತು. ಏಳು ಅಂತಸ್ತಿನ ಕಟ್ಟಡವು ಕುಸಿದಿದೆ. ಈ ಪ್ರದೇಶದಲ್ಲಿ ಸುಮಾರು 45,000 ಕುಟುಂಬಗಳು ವಿದ್ಯುತ್‌ ಸಮಸ್ಯೆಯಿಂದ ಕತ್ತಲಲ್ಲಿ ಜೀವನ ನಡೆಸುವಂತಾಗಿದೆ

Loading

Leave a Reply

Your email address will not be published. Required fields are marked *