ಚಿತ್ರದುರ್ಗ: ಈ ಹಿಂದಿನ ಚುನಾವಣೆ ವೇಳೆ ಪುಲ್ವಾಮಾ (Pulwama) ಘಟನೆ ತೋರಿಸಿದ್ದರು. ಈಗ ರಾಮನ (Rama) ಫೋಟೋ ಹಿಡಿದಿದ್ದಾರೆ ಎಂದು ಸಾಂಖಿಕ ಸಚಿವ ಡಿ.ಸುಧಾಕರ್ (D Sudhakar) ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಚಿತ್ರದುರ್ಗದ ಡಿಸಿಸಿ ಬ್ಯಾಂಕ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ (Ayodhya Ram Mandir) ಉದ್ಘಾಟನೆ ಒಂದು ಸ್ಟಂಟ್. ಜನರು ದಡ್ಡರಿಲ್ಲ, ಎರಡು ಸಲ ಮೂರ್ಖರಾಗಿದ್ದೀವಿ. ಮತ್ತೆ ಮೂರನೇ ಸಲ ಮೂರ್ಖರಾಗಲ್ಲ ಆಗಲ್ಲ ಎಂಬ ಭರವಸೆಯಿದೆ ಎಂದರು.
ಲೋಕಸಭಾ ಚುನಾವಣೆಯ (Loksabha Election) ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆ ಎಂಬುದು ಸತ್ಯ. ರಾಮಮಂದಿರಕ್ಕೆ ನಾನು, ಶಾಸಕ ರಘುಮೂರ್ತಿ ದುಡ್ಡು ಕೊಟ್ಟಿದ್ದೇವೆ. ಹಿಂದೆಲ್ಲಾ ಇಟ್ಟಿಗೆ ಸಹ ನಾವೆಲ್ಲಾ ನೀಡಿದ್ದೇವೆ. ರಾಮ ಎಲ್ಲರಿಗೂ ದೇವರು, ಚುನಾವಣೆ ವೇಳೆ ದೇಗುಲ ಉದ್ಘಾಟನೆ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.