ಮಂಡ್ಯ : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದ್ದು, ಬಿಜೆಪಿ ಹೀನಾಯವಾಗಿ ಸೋಲನುಭವಿಸಿದೆ. ಬಿಜೆಪಿ ಸೋಲಿಗೆ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಕಾರಣ ಬಿಚ್ಚಿಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಎಸ್.ಟಿ. ಸೋಮಶೇಖರ್, ಕರ್ನಾಟಕ ಜನತೆ ನೀಡಿರು ತೀರ್ಪನ್ನು ಸ್ವಾಗತ ಮಾಡಬೇಕು. ಬಿಜೆಪಿ ಸೋಲಿಗೆ ಕಾರಣವೇನು ಎಂಬುದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ತಪ್ಪನ್ನು ತಿದ್ದುಕೊಂಡು ಸರಿಪಡಿಸಿಕೊಳ್ಳುತ್ತೇವೆ ಎಂದರು.
ಪಾಪ ಸುಧಾಕರ್ ಉತ್ತಮ ಕೆಲಸ ಮಾಡಿದ್ರೂ ಸೋತರು, ಕಮೀಷನ್ ಆರೋಪ, ಗ್ಯಾರಂಟಿ ಕಾರ್ಡ್ ಎಫೆಕ್ಟ್ ಆಗಿದೆ.ಕಾಂಗ್ರೆಸ್ ಶೇ. 80 ರಷ್ಟು ಅಲ್ಪಸಂಖ್ಯಾತ ಮತಗಳು ಹೋಗಿವೆ.ಮೀಸಲಾತಿ, ಹಿಜಾಬ್, ಹಲಾಲ್ ಚುನಾವಣೆ ಮೇಲೆ ಪ್ರಭಾವ ಬೀರಿದೆ.ಈ ಬಾರಿಯ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ಈ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲೇ ಅಲ್ಲ ಎಂದು ಹೇಳಿದ್ದಾರೆ.