ಹೊಸ ವರ್ಷದ ಒಂದು ದಿನ ಮೊದಲೇ IPS ಅಧಿಕಾರಿಗಳ ವರ್ಗಾವಣೆ..!

ಬೆಂಗಳೂರು : ಹೊಸ ವರ್ಷಕ್ಕೆ ಒಂದು ದಿನ ಮುಂಚೆಯೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಹೌದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್​ ಆಡಳಿತ ವಿಭಾಗಕ್ಕೆ ಚುರುಕು ಮುಟ್ಟಿಸಲು ಮೇಜರ್ ಸರ್ಜರಿ ಮಾಡಿದೆ. ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲ‌ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ, ಹೊಸ ವರ್ಷಕ್ಕೆ ಗಿಫ್ಟ್​ ನೀಡಿದೆ.

ಕಮಲ್‌ ಪಂಥ್ ಅವರನ್ನು ಡಿಜಿಪಿ ನೇಮಕಾತಿ ವಿಭಾಗಕ್ಕೆ ನೇಮಿಸಿದೆ. ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರೋಡ್ ಸೇಫ್ಟಿ (ರಸ್ತೆ ಸುರಕ್ಷಾ ವಿಭಾಗ) ವಿಭಾಗದ ಸ್ಪೆಷಲ್ ಕಮಿಷನರನ್ನಾಗಿ ಮಾಡಿದೆ. ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿಎಂಟಿಎಫ್​ಗೆ ವರ್ಗಾವಣೆ ಮಾಡಿದೆ.

 

Loading

Leave a Reply

Your email address will not be published. Required fields are marked *