ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ʼನನ್ನು ಕೋಟಿ ಕೋಟಿ ತೆರಿಗೆಯಿಂದ ಬಾಕಿ ಇದ್ದ ಹಿನ್ನೆಲೆಯಲ್ಲಿ ಮಾಲ್ʼನನ್ನು ಕ್ಲೋಸ್ ಮಾಡಿಸಿದ್ದರು. ಆದರೆ ಇಂದಿನಿಂದ ಮತ್ತೆ ಓಪನ್ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಮಂತ್ರಿ ಸ್ಕ್ವಾರ್ ಮಾಲ್‌ಗೆ ಬೀಗ ಹಾಕಲಾಗಿತ್ತು.
ಗ್ರಾಹಕರು ಭೇಟಿ ನೀಡಿ ವಾಪಸ್ ಆಗುತ್ತಿದ್ದರು. ಬುಧವಾರ ಹಾಗೂ ಗುರುವಾರ ಎರಡೂ ದಿನಗಳು ಮಾಲ್ ಬಂದಾಗಿದ್ದು, ವೀಕೆಂಡ್‌ನಲ್ಲಿ ಮಾಲ್‌ನ ಕಥೆಯೇನು..? ಎನ್ನುವುದು ಸದ್ಯದ ಪ್ರಶ್ನೆಯಾಗಿತ್ತು. ಆದರೆ ಇದೀಗ ಖುಷಿ ವಿಚಾರವೆಂದರೆ ಮತ್ತೆ ಓಪನ್ ಆಗಿರುವುದರಿಂದ ಅಲ್ಲಿನ ಗ್ರಾಹಕರು ಮತ್ತು ಕೆಲಸದ ಸಿಬ್ಬಂದಿಗಳು ಫುಲ್ ಖುಷಿಯಾಗಿದ್ದಾರೆ.
ಮಂತ್ರಿ ಮಾಲ್ ಬಂದ್ ಆಗಿದ್ದೇಕೆ..?
2019-20ರಿಂದ 50.63 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದಾರೆ. ಮಂತ್ರಿ ಮಾಲ್ ಆಡಳಿತ ಮಂಡಳಿಯ ಅಭಿಷೇಕ್ ಪ್ರೊಪ್‌ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ಹಮಾರಾ ಶೆಲ್ಟರ್ಸ್ ಪ್ರೈ. ಲಿ. ಕಂಪನಿಗೆ ಹಲವು ಸಲ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದರೂ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.