ವಿಕಲಚೇತನರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ ಸಾರಿಗೆ ಇಲಾಖೆ

ಬೆಂಗಳೂರು:- ವಿಕಲಚೇತನರಿಗೆ ಬಿಎಂಟಿಸಿ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಸಾರಿಗೆ ಇಲಾಖೆ ನಿರ್ದೇಶನದಂತೆ 2024 ರ ಅವದಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡಲು ಸಜ್ಜಾಗಿದೆ.

ಒಂದು ವರ್ಷಕ್ಕೆ 660 ರೂ ದರವನ್ನು ಬಿಎಂಟಿಸಿ ನಿಗದಿ ಮಾಡಿದೆ. ಡಿಸೆಂಬರ್ 29 ರಿಂದ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಗತ್ಯ ಇರುವ ನಿಲ್ದಾಣ ಆಯ್ಕೆ ಮೂಲಕ ಸೇವಾಸಿಂಧು ಪೂರ್ಟಲ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ

ಒಂದು ವರ್ಷವಿಡಿ ವಿಲಕನಚೇತನರಿಗೆ ರಿಯಾಯಿತಿ ದರದ ಪಾಸ್ BMTC ನೀಡಲಿದೆ. ನೂತನ ಪಾಸ್ ಅರ್ಜಿ ಸಲ್ಲಿಸಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಪಾಸ್ ನವೀಕರಣಕ್ಕೆ ಅರ್ಜಿ ಸಲ್ಲಿಸದರೆ ನಗರದ 12 ಕಡೆ ಪಾಸ್ ಲಭ್ಯವಾಗಿದೆ.

Loading

Leave a Reply

Your email address will not be published. Required fields are marked *