ಸೆಂಚೂರಿಯನ್: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ (First Test) ಮೊದಲ ದಿನವೇ ಭಾರತ (Team India) 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ. ವೇಗಿ ರಬಾಡ ಮಾರಕ ಬೌಲಿಂಗ್ ದಾಳಿಗೆ ಭಾರತ ತತ್ತರಿಸಿದೆ. 24 ರನ್ ಗಳಿಸುವಷ್ಟರಲ್ಲೇ ಭಾರತ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ವಿರಾಟ್ ಕೊಹ್ಲಿ (Virat kohli) ಮತ್ತು ಶ್ರೇಯಸ್ ಅಯ್ಯರ್ ನಾಲ್ಕನೇ ವಿಕೆಟಿಗೆ 68 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಕೊಹ್ಲಿ 38 ರನ್, ಶ್ರೇಯಸ್ ಅಯ್ಯರ್ 31 ರನ್ ಗಳಿಸಿ ಔಟಾದರು. ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕೆಎಲ್ ರಾಹುಲ್ (KL Rahul) ತಾಳ್ಮೆಯ ಆಟವಾಡಿ ಔಟಾಗದೇ 70 ರನ್ ಹೊಡೆದರೆ, ಶಾರ್ದೂಲ್ ಠಾಕೂರ್ 24 ರನ್ ಹೊಡೆದು ಸಾಥ್ ನೀಡಿದರು. ಸದ್ಯ ಮೊಹಮ್ಮದ್ ಸಿರಾಜ್ 0 ರನ್ ಹೊಡೆದು ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ರಾಹುಲ್ ಕ್ರೀಸ್‌ಗ ಬರುವಾಗ ತಂಡದ ಮೊತ್ತ 4ವಿಕೆಟ್ ನಷ್ಟಕ್ಕೆ 92 ಆಗಿತ್ತು. ನಂತರ ಭಾರತ 116 ರನ್ ಸೇರಿಸಿದ್ದು ಈ ಪೈಕಿ ರಾಹುಲ್ ಒಬ್ಬರೇ 70 ರನ್ ಹೊಡೆದಿರುವುದು ವಿಶೇಷ. ಇಂದು ಮಳೆಯಿಂದಾಗಿ ಕೇವಲ 59 ಓವರ್ ಮಾತ್ರ ಎಸೆಯಲಾಗಿತ್ತು. ರಬಡಾ 44 ರನ್ ನೀಡಿ 5 ವಿಕೆಟ್ ಕಿತ್ತರೆ, ಬರ್ಜರ್ 2 ವಿಕೆಟ್, ಮಾಕ್ರೋ ಜನ್‌ಸೆನ್ 1 ವಿಕೆಟ್ ಪಡೆದರು. ಇತರ ರೂಪದಲ್ಲಿ 12 ರನ್ ಬಂದಿದೆ.