ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ: ಈ ನೆಲದಲ್ಲಿ ಮಾತ್ರ ಸೂತಕದ ಛಾಯೆ

ಪ್ಯಾಲೆಸ್ತೀನ್: ಜಗತ್ತಿನಾದ್ಯಂತ ಕ್ರಿಸ್ಮಸ್‌ (Christmas) ಹಬ್ಬದ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜೀಸಸ್‌ (Jesus Christ) ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮವಿಲ್ಲ.

ಕ್ರಿಸ್ಮಟ್‌ ಟ್ರೀ ಕೂಡ ಇಲ್ಲ. ಈ ನೆಲದಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ.

ಬೆತ್ಲೆಹೆಮ್‌ (Bethlehem) ಸಾಮಾನ್ಯವಾಗಿ ಕ್ರಿಸ್ಮಸ್‌ನಲ್ಲಿ ಅತ್ಯಂತ ಜನನಿಬಿಡವಾಗಿರುತ್ತದೆ. ಆದರೆ ಈ ವರ್ಷ ಯುದ್ಧದಿಂದಾಗಿ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ಪಟ್ಟಣ ಪ್ರವಾಸಿಗರು ಮತ್ತು ಯಾತ್ರಿಕರಿಲ್ಲದೇ ಬಣಗುಡುತ್ತಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಮಾರಕ ಅಂಗಡಿಗಳು ಖಾಲಿ ಖಾಲಿಯಾಗಿವೆ

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಡೆಯಿತು. ಇದಾದ ಬಳಿಕ ಇಸ್ರೇಲ್‌ ಯುದ್ಧವನ್ನು ಘೋಷಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಮಿಲಿಟರಿ ದಾಳಿ ಮತ್ತು ಪಶ್ಚಿಮ ದಂಡೆಯಲ್ಲಿ ಹಿಂಸಾಚಾರದ ಹೆಚ್ಚಳವಾಗಿದೆ. ಹೀಗಾಗಿ ಬೆತ್ಲೆಹೆಮ್‌ಗೆ ವ್ಯಾಪಾರ ಮಾಲೀಕರು ಯಾರೂ ಬರುತ್ತಿಲ್ಲ.

ಇದು ಪಟ್ಟಣಕ್ಕೆ (ಬೆತ್ಲೆಹೆಮ್‌) ಬಂದೊದಗಿದ ಅತ್ಯಂತ ಕೆಟ್ಟ ಕ್ರಿಸ್ಮಸ್‌ ದಿನವಾಗಿದೆ. ಬೆತ್ಲೆಹೆಮ್‌ ಅನ್ನು ಬಂದ್‌ ಮಾಡಲಾಗಿದೆ. ಕ್ರಿಸ್ಮಸ್ ಟ್ರೀ ಇಲ್ಲ, ಸಂತೋಷವಿಲ್ಲ, ಕ್ರಿಸ್ಮಸ್ ಉತ್ಸಾಹವಿಲ್ಲ ಎಂದು ಸ್ಥಳೀಯರು ನೊಂದು ನುಡಿದಿದ್ದಾರೆ.

ಜೆರುಸಲೆಮ್‌ನ ದಕ್ಷಿಣದಲ್ಲಿರುವ ಬೆತ್ಲೆಹೆಮ್‌ ಜೀಸಸ್ ಜನಿಸಿದ ಪವಿತ್ರ ಸ್ಥಳ ಎಂದು ಕ್ರಿಶ್ಚಿಯನ್ನರು ನಂಬಿದ್ದಾರೆ. ನೇಟಿವಿಟಿ ಚರ್ಚ್ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಜನ ಕ್ರಿಸ್ಮಸ್‌ ಸಂದರ್ಭದಲ್ಲಿ ಬರುತ್ತಿದ್ದರು. ಸ್ಥಳೀಯರಿಗೆ ಪ್ರವಾಸಿಗರೇ ಆದಾಯ ಮೂಲವಾಗಿದ್ದರು. ಆದರೆ ಯುದ್ಧದಿಂದಾಗಿ ಕ್ರಿಸ್ಮಸ್‌ ಸಂಭ್ರಮ ಇಲ್ಲದಂತಾಗಿದೆ.

ಕ್ರಿಸ್ಮಸ್‌ ಸಂದರ್ಭದಲ್ಲಿ ತುಂಬಿ ತುಳುಕುತ್ತಿದ್ದ ಹೋಟೆಲ್‌ಗಳು ಈಗ ಖಾಲಿ ಹೊಡೆಯುತ್ತಿವೆ. ಕ್ರಿಸ್ಮಸ್ ಬ್ರೇಕ್ಫಾಸ್ಟ್ ಇಲ್ಲ, ಕ್ರಿಸ್ಮಸ್ ಡಿನ್ನರ್ ಇಲ್ಲ, ಕ್ರಿಸ್ಮಸ್ ಬಫೆ ಇಲ್ಲ ಎಂದು ಹೋಟೆಲ್‌ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ

Loading

Leave a Reply

Your email address will not be published. Required fields are marked *