ಟರ್’ನ ನೂತನ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕಗೊಂಡಿದ್ದು, ಎಲೋನ್ ಮಸ್ಕ್ ಅವ್ರನ್ನ ಸ್ವಾಗತಿಸಿದ್ದಾರೆ.
ಹೌದು, ಎನ್ಬಿಸಿ ಯುನಿವರ್ಸಲ್’ನ ಜಾಹೀರಾತು ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟರ್’ನ ಸಿಇಒ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಮಸ್ಕ್, ‘ಟ್ವಿಟರ್ನ ನೂತನ ಸಿಇಒ ಆಗಿ ಲಿಂಡಾ ಯಾಕರಿನೊ ಅವರನ್ನ ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ! ಯಾಕರಿನೊ ಪ್ರಾಥಮಿಕವಾಗಿ ವ್ಯವಹಾರ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತಾರೆ. ಆದರೆ ನಾನು ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುತ್ತೇನೆ. ಈ ಪ್ಲಾಟ್ಫಾರ್ಮ್ ಅನ್ನು ಎಕ್ಸ್ ಆಗಿ ಪರಿವರ್ತಿಸಲು ಲಿಂಡಾ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.