ದಾವಣಗೆರೆ : ಹಿಜಾಬ್ ಬಗ್ಗೆ ಸಿಎಂ ಸಿದ್ದರಾಮಯ್ಯ ಯು ಟರ್ನ್ ಹೊಡೆದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ ಸಿಎಂ ಹೇಳಿಕೆ ವಾಪಸ್ ಪಡೆದಿರುವುದು ಒಳ್ಳೆಯ ಸಂಗತಿ ಈಗಲಾದರೂ ಅವರಿಗೆ ಸದ್ಬುದ್ಧಿ ಬಂದಿದೆ. ನಾವೇನು ಅಲ್ಪ ಸಂಖ್ಯಾತರ ವಿರೋಧಿಗಳಲ್ಲ ಹಿಂದು ಮುಸ್ಲಿಂ ಕ್ರೈಸ್ತ್ ರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎನ್ನುತ್ತೇವೆ.
ಜಾತಿ ವಿಷ ಬೀಜ ಬಿತ್ತುವುದನ್ನ ಸಿದ್ದರಾಮಯ್ಯ ನಿಲ್ಲಿಸಬೇಕು ಹಾಗೆ ಇದರಿಂದ ಯಾವುದೇ ಲಾಭ ಆಗುವುದಿಲ್ಲ ಎಂದು ಸಿಎಂ ವಿರುದ್ಧ ಯಡಿಯೂರಪ್ಪ ಕಿಡಿಕಾರಿದರು.ಹಾಗೆ ಜಾತಿಗಣತಿ ಬಗ್ಗೆ ಸಮುದಾಯದ ವಿರೋಧ ವಿಚಾರ ಬಗ್ಗೆಯೂ ಮಾತನಾಡಿದ ಅವರು, ಈಗಾಗಲೇ ಜಾತಿಗಣತಿ ಬಗ್ಗೆ ಎಲ್ಲರ ಮನಸ್ಸಲ್ಲು ವಿರೋಧವಿದೆ ನಾನು ಅದೇ ಭಾವನೆಯನ್ನ ವ್ಯಕ್ತಪಡಿಸುತ್ತೇನೆ ಹೊಸದಾಗಿ ಜಾತಿಗಣತಿ ಮಾಡಬೇಕು ಪ್ರಸ್ತುತ ಸ್ಥಿತಿಯನ್ನ ಜನತೆಗೆ ತಿಳಿಸಬೇಕು.
ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಬಿಎಸ್ ವೈ ಒತ್ತಾಯ ಂಆಡಿದರು.ಹಾಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಆಯ್ಕೆ ವಿಚಾರ ಬಗ್ಗೆಯೂ ಮಾತನಾಡಿ, ಮುಂದಾಲೋಚನೆ ಮಾಡಿ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದೆ ವಿಜಯೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಜೊತೆ ಚರ್ಚೆ ಮಾಡಿಆಯ್ಕೆ ಮಾಡಿದ್ದಾರೆ ಬಹಳಷ್ಟು ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ಯಾವುದೇ ಅಪಸ್ವರ ಬಂದಿಲ್ಲ ಅಳೆದು ತೂಗಿ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದೆ.
ಎಲ್ಲರಿಗೂ ಒಪ್ಪಿಗೆ ಇದೆ ಪದಾಧಿಕಾರಿಗಳು ಉತ್ತಮ ಕೆಲಸ ಮಾಡಿ ನಮ್ಮ ಟಾರ್ಗೆಟ್ 28 ಕ್ಷೇತ್ರಗಳನ್ನ ಗೆಲ್ಲಬೇಕು ನೂತನ ಪದಾಧಿಕಾರಿಗಳನ್ನ ನಾನು ಭೇಟಿ ಮಾಡಿ ಚರ್ಚಿಸುತ್ತೇನೆ ಮುಂದಿನ ವಾರ ನಾನು ಕೂಡ ಲೋಕಸಭೆ ಚುನಾವಣೆ ಪ್ರಚಾರ ಶುರು ಮಾಡುತ್ತೇನೆ. ವಿಜಯೇಂದ್ರ ಒಂದು ಕಡೆ ನಾನೊಂದು ಕಡೆ ಪ್ರವಾಸ ಕೈಗೊಳ್ಳುತ್ತೇವೆ ಎಂದುಶಾಸಕ ಯತ್ನಾಳ ನಿರಂತರ ಆರೋಪ ವಿಚಾರ ಬಗ್ಗೆಯೂ ಮಾತನಾಡಿ, ಅವರ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡುವುದಿಲ್ಲ ಮಾತಾಡೋಕೆ ಅವರು ಸರ್ವ ಸ್ವತಂತ್ರರು ಏನು ಬೇಕಾದ್ರು ಮಾತಾಡಬಹುದು ಅವರ ವಿರುದ್ಧ ಹೈ ಕಮಾಂಡ್ ಗೆ ದೂರು ನೀಡುವ ಪ್ರಶ್ನೆಯೇ ಇಲ್ಲ ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದ ಯಡಿಯೂರಪ್ಪ ಹೇಳಿದರು.