ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ

ನವದೆಹಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಆಪ್ತ ಸಂಜಯ್ ಸಿಂಗ್ (Sanjay Singh) ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ವಿರೋಧಿಸಿ, ಕುಸ್ತಿಪಟು ಬಜರಂಗ್‌ ಪುನಿಯಾ (Bajrang Punia) ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ಸಂಜಯ್‌ ಸಿಂಗ್‌ ಆಯ್ಕೆ ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲಿಕ್‌ (Sakshee Mallikh), ಗುರುವಾರ ಕಣ್ಣೀರಿಟ್ಟು ಕುಸ್ತಿಗೆ ವಿದಾಯ ಹೇಳಿದರು. ಇದರ ಬೆನ್ನಲ್ಲೇ ಬಜರಂಗ್‌ ಪುನಿಯಾ, ಪದ್ಮಶ್ರೀ ಪ್ರಶಸ್ತಿ (Padma Shri) ಹಿಂದಿರುಗಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ. ‘ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಗೆ ಹಿಂದಿರುಗಿಸುತ್ತಿದ್ದೇನೆ. ಅದನ್ನು ಹೇಳಲು ಈ ಪತ್ರ ಬರೆದಿದ್ದೇನೆ ಎಂದು ಬಜರಂಗ್‌ ಪುನಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

‘ಎಲ್ಲಿ ಹೋಗಬೇಕು, ಏನು ಮಾಡಬೇಕು ಮತ್ತು ಹೇಗೆ ಬದುಕಬೇಕು ಎಂದು ನನಗೆ ಅರ್ಥವಾಗಲಿಲ್ಲ. ಸರ್ಕಾರ ಮತ್ತು ಜನರು ನನಗೆ ತುಂಬಾ ಗೌರವ ನೀಡಿದರು. ಈ ಗೌರವದ ಹೊರೆಯಲ್ಲಿ ನಾನು ಉಸಿರುಗಟ್ಟುವುದನ್ನು ಮುಂದುವರಿಸಬೇಕೇ? 2019 ರಲ್ಲಿ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

ನನಗೂ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳು ದೊರೆತಿವೆ. ಈ ಗೌರವಗಳು ನನಗೆ ಸಿಕ್ಕಾಗ ತುಂಬಾ ಸಂತೋಷವಾಯಿತು. ಜೀವನದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅನಿಸಿತು. ಆದರೆ ಇಂದು ನಾನು ಆ ಕಾಲದ ಸಂತೋಷಕ್ಕಿಂತ ಹೆಚ್ಚು ದುಃಖಿತನಾಗಿದ್ದೇನೆ. ಈ ಗೌರವಗಳು ನನ್ನನ್ನು ಉಸಿರುಗಟ್ಟಿಸುತ್ತಿವೆ’ ಎಂದು ಪುನಿಯಾ ಹಿಂದಿಯಲ್ಲಿ ಪತ್ರ ಬರೆದಿದ್ದಾರೆ.

Loading

Leave a Reply

Your email address will not be published. Required fields are marked *