ಡೊನಾಲ್ಡ್​ ಟ್ರಂಪ್​ಗೆ ಬಿಗ್‌ ಶಾಕ್:‌ ಅಧ್ಯಕ್ಷೀಯ ಚುನಾವಣೆಯಲ್ಲಿಸ್ಪರ್ಧಿಸದಂತೆ ತೀರ್ಪು

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (Presidential Elections) ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಕೊಲೊರಾಡೋ ಕೋರ್ಟ್ (Colorado Court) ಅನರ್ಹಗೊಳಿಸಿದೆ.

ಕ್ಯಾಪಿಟಲ್‌ ಹಿಲ್‌ (Capitol Hill) ದಂಗೆಯಲ್ಲಿ ಟ್ರಂಪ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶ ಪ್ರಕಟಿಸಿದೆ.

ಆದೇಶವನ್ನು ಪ್ರಶ್ನಿಸಲು ಜ.4ರವರೆಗೆ ಮೇಲ್ಮನವಿ ಸಲ್ಲಿಸಲು ಟ್ರಂಪ್‌ಗೆ ಅವಕಾಶ ನೀಡಲಾಗಿದೆ.

ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರನ್ನು ಚುನಾವಣೆಯಿಂದಲೇ ಅನರ್ಹಗೊಳಿಸಿದ್ದು ಇದೇ ಮೊದಲು. ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್‌ ವಕ್ತಾರರು, ಇದೊಂದು ಸಂಪೂರ್ಣ ದೋಷಪೂರಿತ ಆದೇಶ. ಈ ತೀರ್ಪನ್ನು ಪ್ರಶ್ನಿಸಿ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಏನಿದು ಪ್ರಕರಣ?
2021ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಟ್ರಂಪ್‌ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಪ್ರಭಾವಿತರಾಗಿ 2 ಸಾವಿರಕ್ಕೂ ಹೆಚ್ಚು ಟ್ರಂಪ್‌ ಬೆಂಬಲಿಗರು ಜನವರಿ 6 ರಂದು ಅಮೆರಿಕದ ಸಂಸತ್‌ ಕಟ್ಟಡ ಅಥವಾ ಕ್ಯಾಪಿಟಲ್‌ ಹಿಲ್‌ ಮೇಲೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಸಂಬಂಧ ವಾಷಿಂಗ್ಟನ್‌ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ಸಂಬಂಧ ಟ್ರಂಪ್‌ ವಿರುದ್ಧ ಕೇಸ್‌ ದಾಖಲಾಗಿತ್ತು.

Loading

Leave a Reply

Your email address will not be published. Required fields are marked *