ಬ್ಯಾಂಕ್ ಲೂಟಿಗೆ ಹೊರಟ ದೀಕ್ಷಿತ್ ಶೆಟ್ಟಿ ಹಾಗೂ ತಂಡ

ರಂಗಿ ತರಂಗ, ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಿರ್ಮಾಪಕ ಹೆಚ್. ಕೆ ಪ್ರಕಾಶ್, ಈ ಬಾರಿ ಮತ್ತೆ ಹೊಸ ತಂಡದೊಂದಗೆ ಹಾಸ್ಯ ಪ್ರಧಾನ ಚಿತ್ರ ನಿರ್ಮಿಸುತ್ತಿದ್ದಾರೆ. ದಿಯಾ ಖ್ಯಾತಿಯ ಹಾಗೂ ತೆಲುಗಿನ ದಸರಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಹಾಸ್ಯ ಪಾತ್ರದ ಹುಡುಕಾಟದಲ್ಲಿದ ದೀಕ್ಷಿತ್ ಶೆಟ್ಟಿ ಬಯಸಿದಂತೆ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದಾರೆ.

ದಿಯಾ ಹಾಗೂ ದಸರಾ ಅಭಿನಯಕ್ಕೆ ಹೆಸರು ಮಾಡಿದ ಮೇಲೆ ತಮಿಳು ,ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ,
ಸದಾ ಹೊಸ ಪ್ರತಿಭೆಗೆ ಅವಕಾಶ ನೀಡುವ ನಿರ್ಮಾಪಕ ಹೆಚ್. ಕೆ ಪ್ರಕಾಶ್ ಈ ಸಿನಿಮಾಗೆ ನವ ಹಾಗೂ ಪ್ರತಿಭಾವಂತ ನಿರ್ದೇಶಕ ಅಭಿಷೇಕ್ ಎಂ ಅವರ ನಿರ್ದೇಶನ ಜವಾಬ್ದಾರಿ ನೀಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗು ಕೆಲ ಸಿನೆಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. ‘ಪಿನಾಕ’ ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ‘ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ

ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಬಹುದೊಡ್ಡ ನವ ತಾರಾಗಣ ಚಿತ್ರದಲ್ಲಿದೆ. ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ತಾರಾಗಣದಲ್ಲಿ ಅಶ್ವಿನ್ ರಾವ್ ಹಾಸ್ಟೇಲ್ ಹುಡುಗರು ಖ್ಯಾತಿಯ ಶ್ರೀ ವತ್ಸ, ಶ್ರೇಯಸ್ ಶರ್ಮಾ , ವಿನುತ ಇನ್ನಿತರು ಇದ್ದಾರೆ.

 

Loading

Leave a Reply

Your email address will not be published. Required fields are marked *