ಬೆಂಗಳೂರು: ವಿದ್ಯುತ್ ಕಾಮಗಾರಿ ಹಿನ್ನೆಲೆ, ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ. ಬೆಂಗಳೂರಿನ ಉತ್ತರ ಭಾಗದ ಹಲವೆಡೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ಇಂದಿನಿಂದ ಗುರುವಾರದವರೆಗೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ವಹಣಾ ಕಾರ್ಯದಿಂದಾಗಿ ಮೂರು ದಿನ ಪವರ್ ಕಟ್ ಇರಲಿದೆ.
ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಜಯನಗರ, ಹೊಂಡಾಡ ಸರ್ಕಲ್, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಟೊಯೋಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಮೌನೇಶ್ವರ ಬಡಾವಣೆ, ಆದರ್ಶ ನಗರ, ಆದರ್ಶ ಲೇಔಟ್, ಮಂಜುನಾಥ ನಗರ, 3ನೇ ಹಂತ 1ನೇ ಬ್ಲಾಕ್, ಜಾಲಿ ನಗರ, ಶಿವಾಜಿ ನಗರ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ, ಎಂ.ಬಿ.ಕೇರಿ, ಚಲುವಾದಿ ಕೇರಿ ಮತ್ತು ಒಡ್ಡನಹಳ್ಳಿಯಲ್ಲಿ ಇಂದು ಪವರ್ಕಟ್ ಇರಲಿದೆ.