ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಬೆಸ್ಟ್ ಜೋಡಿ ಎನಿಸಿಕೊಂಡಿದ್ದರು. ಸುಮಾರು ಹದಿನಾರು ವರ್ಷಗಳ ಕಾಲ ತುಂಬು ಸಂಸಾರ ಮಾಡಿದ್ದ ಈ ದಂಪತಿಯ ಬಗ್ಗೆ ಇತ್ತೀಚಿಗೆ ಕೆಲವು ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಈ ಗಾಳಿ ಸುದ್ದಿಗೆ ಪುಷ್ಟಿಕೊಡುವ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.
ಐಶ್ವರ್ಯಾ ರೈ ಅವರು ತನ್ನ ತಾಯಿಯ ಮನೆಯಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಅಂತರ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಎರಡು ವರ್ಷಗಳ ಹಿಂದೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿದೆ. ಆದರೆ ಇಬ್ಬರೂ ತಮ್ಮ ಮಗಳು ಆರಾಧ್ಯ ಗೋಸ್ಕರ ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೆಲ್ಲದರ ನಡುವೆ ಅಮಿತಾಬ್ ಮತ್ತು ಐಶ್ವರ್ಯ ಒಬ್ಬರನ್ನೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಆದರೆ ಈ ಕುರಿತು ಬಚ್ಚನ್ ಕುಟುಂಬದವರಾಗಲಿ, ಐಶ್ವರ್ಯ ಮತ್ತು ಅಭಿಷೇಕ್ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಲು ಅತ್ತೆ- ಸೊಸೆ ನಡುವಿನ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ. ಐಶ್ವರ್ಯಾ ರೈ ಹಾಗೂ ಅತ್ತೆ ಜಯಾ ಬಚ್ಚನ್ ಮಧ್ಯೆ ಕಳೆದ ಕೆಲ ವರ್ಷಗಳಿಂದ ಮನಸ್ತಾಪಗಳಿದ್ದು, ಹಲವಾರು ವರ್ಷಗಳಿಂದ ಇವರಿಬ್ಬರು ಪರಸ್ಪರ ಮಾತನಾಡುತ್ತಿಲ್ಲ ಎಂದು ಸಹ ಹೇಳಲಾಗುತ್ತಿದೆ
ಇತ್ತೀಚಿಗೆ ಐಶ್ವರ್ಯ-ಅಭಿಷೇಕ್ ಮಗಳ ಶಾಲಾ ವಾರ್ಷಿಕೋತ್ಸವದಲ್ಲಿ ಬಚ್ಚನ್ ಫ್ಯಾಮಿಲಿಯ ಎಲ್ಲರೂ ಭಾಗಿಯಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಅಮಿತಾಭ್, ಜಯಾ ಬಚ್ಚನ್, ಅಭಿಷೇಕ್ ಒಂದು ಕಾರಿನಲ್ಲಿ ಬಂದರೆ, ಐಶ್ವರ್ಯ ರೈ ಮತ್ತೊಂದು ಕಾರಿನಲ್ಲಿ ಬಂದಿದ್ದರು. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದವರು ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಕು ಮೂಡಿರಬಹುದೆಂದು ಅಂದಾಜಿಸಿದ್ದರು.
ಇದೀಗ ನಟಿ ಐಶ್ವರ್ಯ ರೈ ಮಗಳೊಂದಿಗೆ ಪತಿಯ ಮನೆ ತೊರೆದು ತಮ್ಮ ನಿವಾಸಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್‌ನ ಪ್ರಖ್ಯಾತ ಕುಟುಂಬಗಳಲ್ಲಿ ಒಂದಾಗಿರುವ ಅಮಿತಾಬ್ ಬಚ್ಚನ್ ಅವರ ಕುಟುಂಬದ ವಿಚಾರದ ಬಗ್ಗೆ ಗಾಸಿಪ್‌ಗಳು ಹರಿದಾಡುತ್ತಿದ್ದರೂ, ಬಚ್ಚನ್ ಫ್ಯಾಮಿಲಿಯ ಯಾರೊಬ್ಬರು ಕೂಡ ಈ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಐಶ್ವರ್ಯ-ಅಭಿಷೇಕ್ ಸಂಸಾರದ ಗಾಳಿ ಸುದ್ದಿಯ ಬಗ್ಗೆ ಬಚ್ಚನ್ ಕುಟುಂಬಸ್ಥರಿಂದಲೇ ಅಧಿಕೃತ ಸ್ಪಷ್ಟನೆ ಹೊರಬೀಳಬೇಕಿದೆ.