ಮುಂಬೈ: ಗೆಳತಿಯ ಕಾಲಿನ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧ ಥಾಣೆ (Thane) ವಿಭಾಗದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ (BJYM) ಅಶ್ವಜಿತ್ ಗಾಯಕ್ವಾಡ್ ವಿರುದ್ಧ ಕೇಸ್ ದಾಖಲಾಗಿದೆ. ಗಾಯಾಳು ಗೆಳತಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಿಯಾ ಆರೋಪಗಳನ್ನೆಲ್ಲಾ ಅಶ್ವಜಿತ್ ತಿರಸ್ಕರಿಸಿದ್ದು, ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ. ಅಲ್ಲದೇ ಅವಳು ಬಿಂಬಿಸಿದ್ದೆಲ್ಲ ಸುಳ್ಳಾಗಿದೆ. ಪ್ರಿಯಾ ನನಗೆ ಜಸ್ಟ್ ಫ್ರೆಂಡ್ ಅಷ್ಟೇ ಎಂದು ಪೊಲೀಸರ ಮುಂದೆ ಅಶ್ವಜಿತ್ ಹೇಳಿದ್ದಾನೆ.
ನಾನು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹೋಟೆಲ್‍ಗೆ ಕುಡಿದ ಅಮಲಿನಲ್ಲಿ ಬಂದಿದ್ದ ಪ್ರಿಯಾ, ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸಿದಳು. ಈ ವೇಳೆ ನಾನು ನಿರಾಕರಿಸಿದಾಗ ಆಕೆ ನನ್ನ ಮೇಲೆ ದೌರ್ಜನ್ಯ ಎಸಗಿದಳು. ಅಲ್ಲದೆ ನನ್ನ ಸ್ನೇಹಿತರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾಳೆ. ನನ್ನ ಡ್ರೈವರ್ ಶೆಲ್ಕೆ, ಅವಳು ಪಕ್ಕಕ್ಕೆ ಹೋಗುವಂತೆ ನನ್ನ ಕಾರನ್ನು ಸ್ಟಾರ್ಟ್ ಮಾಡಿದರು. ಆದರೆ ಕಾರು ಸ್ವಲ್ಪ ತಾಗಿ ಕೆಳಗೆ ಬಿದ್ದಳು. ಈ ಅಪಘಾತ ಉದ್ದೇಶಪೂರ್ವಕವಲ್ಲ ಎಂದು ವಿವರಿಸಿದ್ದಾನೆ. ಇದು ಏನೂ ಅಲ್ಲ, ಆದರೆ ಇದು ನನ್ನಿಂದ ಸುಲಿಗೆ ಮಾಡುವ ಮಾರ್ಗವಾಗಿದೆ. ನಾನು ಈ ಹಿಂದೆಯೂ ಅವಳಿಗೆ ಹಣವನ್ನು ನೀಡಿದ್ದೇನೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದನು.