ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿಯಿರುವುದಿಲ್ಲ: CM ಸಿದ್ದರಾಮಯ್ಯ

ಧಾರವಾಡ:-ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿಯಿರುವುದಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ಕಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷಚೇತನರಿಗೆ ವಾಹನ ವಿತರಣೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್​​​ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಸಮಾಜದಲ್ಲಿಂದು ಶೇ. 90ರಷ್ಟು ಸಂಪತ್ತು ಕೇವಲ ಶೇ. 10ರಷ್ಟು ಜನರಲ್ಲಿ ಕೇಂದ್ರೀಕೃತವಾಗಿದೆ.

ಇದರಿಂದಾಗಿಯೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಈ ಅಸಮಾನತೆ ತೊಲಗಿಸುವ ಬಗ್ಗೆ ಅಂಬೇಡ್ಕರ್ ಹೇಳಿದ್ದರು. ಅಸಮಾನತೆ ಇರೋವರೆಗೂ ಸಮಾಜದಲ್ಲಿ ನೆಮ್ಮದಿ, ಶಾಂತಿ ಇರಲು ಸಾಧ್ಯವಿಲ್ಲ. ಅಸಮಾನತೆಯಿಂದ ಬಳಲುವವರು ಮುಖ್ಯವಾಹಿನಿಗೆ ಬರಬೇಕು. ಇಲ್ಲದೇ ಹೋದರೆ ಅಸಮಾನತೆ ಮುಂದುವರೆಯುತ್ತದೆ ಎಂದರು.

ಅಂಬೇಡ್ಕರ್ ಅವರು 1949ರ ನ. 25ರಂದು ಭಾಷಣ ಮಾಡಿದ್ದರು. 1950ರ ಜನವರಿ 26ರಿಂದ ವೈವಿಧ್ಯತೆಯ ಸಮಾಜಕ್ಕೆ ಕಾಲಿಡುತ್ತೇವೆ ಎಂದು ಹೇಳಿದ್ದರು. ಇಂದು ನಮಗೆ ಸ್ವಾತಂತ್ರ್ಯ ಬಂದಿದೆ. ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಅದು ಯಶಸ್ವಿಯಾಗಲು ಅಸಮಾನತೆಯನ್ನು ತೊಡೆದು ಹಾಕಲೇಬೇಕು. ಆದ್ರೆ ಸ್ವಾತಂತ್ರ್ಯ ಬಂದ ಮೇಲೂ ಅಸಮಾನತೆಯಿಂದ ಜನರು ನರಳುತ್ತಿದ್ದಾರೆ. ಈ ರಾಜಕೀಯ, ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕು ಎಂದು ತಿಳಿಸಿದರು.

Loading

Leave a Reply

Your email address will not be published. Required fields are marked *