ಚಿಕ್ಕಬಳ್ಳಾಪುರ: ರೈಲಿಗೆ ಸಿಕ್ಕಿ 80 ಕುರಿ ಸಾವು

ಚಿಕ್ಕಬಳ್ಳಾಪುರ:  ರೈಲಿಗೆ ಸಿಕ್ಕಿ 80 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಗ್ರಾಮದ ಬಳಿ ನಡೆದಿದೆ. ರೈಲ್ವೆ ಹಳಿಗಳ ಪಕ್ಕದಲ್ಲೇ ಕೂದಲಮ್ಮ, ಕೂದಲಪ್ಪ, ಹಾಗೂ ದೇವರಾಜ್ ಎಂಬುವವರು ಕುರಿಗಳನ್ನ ಮೇಯಿಸುತ್ತಿದ್ದ ವೇಳೆ ನಾಯಿಗಳು ದಾಳಿ ಮಾಡಿವೆ.

ನಾಯಿಗಳ ದಾಳಿಯಿಂದ ಕುರಿಗಳು ಬೆದರಿ ರೈಲು ಬರುವ ಸಮಯಕ್ಕೆ ರೈಲ್ವೆ ಹಳಿಗಳ ಮೇಲೆ ನುಗ್ಗಿವೆ. ಹೈಸ್ಪೀಡ್‌ನಲ್ಲಿ ಬರುತ್ತಿದ್ದ ರೈಲಿಗೆ ಸಿಕ್ಕಿ 80 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ರೈಲ್ವೆ ಹಳಿಗಳ ಮೇಲೆ ರಾಶಿ ರಾಶಿ ಕುರಿಗಳು ಸಾವನ್ನಪ್ಪಿ ಬಿದ್ದಿವೆ. ಘಟನೆಯಲ್ಲಿ ಕುರಿಗಾಹಿ ಮಹಿಳೆ ಕೂದಲಮ್ಮ ಸಹ ಗಾಯಗೊಂಡಿದ್ದಾರೆ.

Loading

Leave a Reply

Your email address will not be published. Required fields are marked *