ಅದಾನಿ-ಹಿಂಡೆನ್ಬರ್ಗ್ ಪ್ರಕರಣ : ಮೇ 15ಕ್ಕೆ ವಿಚಾರಣೆ ಮುಂದೂಡಿಕೆ

ವದೆಹಲಿ : ಅದಾನಿ-ಹಿಂಡೆನ್‌ಬರ್ಗ್ ಪ್ರಕರಣವನ್ನ ಸುಪ್ರೀಂಕೋರ್ಟ್ ಮುಂದೂಡಿದ್ದು, 15 ಮೇ 2023ರಂದು ವಿಚಾರಣೆ ನಡೆಸಲಿದೆ. ಇನ್ನು ಇದಕ್ಕೂ ಮುನ್ನ ಸೆಬಿ ನ್ಯಾಯಾಲಯದಿಂದ ಆರು ತಿಂಗಳ ಕಾಲಾವಕಾಶ ಕೋರಿತ್ತು. ಆದ್ರೆ, ತನಿಖೆ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶ ನೀಡಬೇಕೆಂಬ ಬೇಡಿಕೆ ಸಮಂಜಸವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೆಬಿಗೆ ತಿಳಿಸಿದರು.

ಆಗಸ್ಟ್ 14 ರ ಸುಮಾರಿಗೆ ನಾವು ವಿಚಾರಣೆ ನಡೆಸುತ್ತೇವೆ ಮತ್ತು ಮೂರು ತಿಂಗಳೊಳಗೆ ನೀವು ತನಿಖೆಯನ್ನ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಇನ್ನು ಸೋಮವಾರದ ವಿಚಾರಣೆ ವೇಳೆ ಸೆಬಿಯ ಅರ್ಜಿಯನ್ನ ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ವಿಚಾರಣೆಯ ಸಂದರ್ಭದಲ್ಲಿ, ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಅದಾನಿ ಪ್ರಕರಣದ ತನಿಖೆಯನ್ನ ಪೂರ್ಣಗೊಳಿಸಲು ನ್ಯಾಯಾಲಯದಿಂದ ಇನ್ನೂ ಆರು ತಿಂಗಳ ಕಾಲಾವಕಾಶವನ್ನ ಕೋರಿತ್ತು. ಸೆಬಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯದ ದೃಷ್ಟಿಯಿಂದ ಇನ್ನೂ ಆರು ತಿಂಗಳ ಕಾಲಾವಕಾಶದ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Loading

Leave a Reply

Your email address will not be published. Required fields are marked *