ಹೃದಯ ವಿದ್ರಾವಕ ಘಟನೆ: ಮಕ್ಕಳಿಬ್ಬರ ಜೊತೆ, ಪತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಜಿಲ್ಲೆಯ ಆನೇಕಲ್ ನಲ್ಲಿ ಪತ್ನಿ ಶೋಕಿ ಜೀವನಕ್ಕೆ ಬೇಸತ್ತು ಮಕ್ಕಳನ್ನು ಕೊಂದು, ಆ ಬಳಿಕ ಪತಿಯೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಕೊಪ್ಪ ಸಮೀಪದ ನಿರ್ಮಾಣ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಪತ್ನಿ ಶೋಕಿ ಜೀವನಕ್ಕೆ ಬೇಸತ್ತು ಮಕ್ಕಳು, ಪತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

 

ಮೊದಲು ಮಕ್ಕಳಾದಂತ ಪ್ರಜ್ವಲ್ (6) ಹಾಗೂ ರಿಷಬ್ (4) ಅನ್ನು ನೇಣುಹಾಕಿದಂತ ತಂದೆ ಹರೀಶ್(35) ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಮೇ.10ರಂದು ನಡೆದಿದ್ದಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನಾ ಹರೀಶ್, ತನ್ನ ಸ್ನೇಹಿತರಿಗೆ ವಾಟ್ಸಾಪ್ ಕರೆ ಮಾಡಿ, ತನಗೆ ಬರಬೇಕಾದ ಹಣ, ಎಲ್‌ಐಸಿ ಬಾಂಡ್ ಪತ್ನಿಗೆ ನೀಡುವಂತೆ ಸೂಚಿಸಿದ್ದರು.

ಹರೀಶ್ ಕರೆ ಮಾಡಿದಂತ ವಿಷಯವನ್ನು ಸ್ನೇಹಿತರೂ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಅವರ ಮೊಬೈಲ್ ಲೊಕೋಷನ್ ಟ್ರೇಸ್ ಮಾಡಿದಾಗ ಜಿಗಣಿ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಇದೀಗ ಆನೇಕಲ್ ಬಳಿಯ ಕೊಪ್ಪ ಸಮೀಪದ ನಿರ್ಮಾಣ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಹರೀಶ್ ಹಾಗೂ ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading

Leave a Reply

Your email address will not be published. Required fields are marked *