ಪಾಕಿಸ್ತಾನದ ಮೃಗಾಲಯದಲ್ಲಿ ಹುಲಿಯ ಹಾವಳಿ! ವ್ಯಕ್ತಿ ಬಲಿ

ಸ್ಲಾಮಾಬಾದ್: ಪಾಕಿಸ್ತಾನದ (Pakistan) ಮೃಗಾಲಯದಲ್ಲಿ (Zoo) ಹುಲಿ ಇರುವ ಆವರಣಕ್ಕೆ ವ್ಯಕ್ತಿಯೊಬ್ಬ ಬಿದ್ದು ಹುಲಿಗೆ ಆಹಾರವಾಗಿರುವ ಘಟನೆ ನಡೆದಿದೆ. ಪಾಕಿಸ್ತಾನದ ಪಂಜಾಬ್‌ನ ಪೂರ್ವ ಪ್ರಾಂತ್ಯದ ಬಹವಾಲ್‌ಪುರದ ಶೇರ್‌ಬಾಗ್ ಮೃಗಾಲಯದಲ್ಲಿ ಎಂದಿನಂತೆ ಸಿಬ್ಬಂದಿ ಶುಚಿಗೊಳಿಸುತ್ತಿದ್ದ ಸಂದರ್ಭ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಂಡಿತ್ತು.ಈ ಶೂ ಎಲ್ಲಿಂದ ಬಂತು ಎಂದು ಪರಿಶೀಲಿಸಿದಾಗ ಹುಲಿ ಇರುವ ಆವರಣದ ಒಳಗಡೆಯೇ ವ್ಯಕ್ತಿಯ ಶವ ಪತ್ತೆಯಾಗಿದೆ.

ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಳ್ಳುತ್ತಲೇ ಅನುಮಾನಗೊಂಡ ಸಿಬ್ಬಂದಿ ಗುಹೆಯೊಳಗೆ ಪರಿಶೀಲಿಸಿದಾಗ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಪ್ರವಾಸಿಗರು ಆಕಸ್ಮಿಕವಾಗಿ ಹುಲಿ ಇರುವ ಆವರಣದೊಳಗೆ ಬೀಳಲು ಸಾಧ್ಯವೇ ಇಲ್ಲ. ಅದರ ಗೇಟ್‌ಗಳು ಭದ್ರವಾಗಿದೆ. ಹೀಗಾಗಿ ವ್ಯಕ್ತಿ ತಾನಾಗಿಯೇ ಹುಲಿಯ ಆವರಣದೊಳಗೆ ಹೋಗಿರುವ ಶಂಕೆ ವ್ಯಕ್ತಗಿರುವುದಾಗಿ ಬಹವಾಲ್ಪುರದ ಹಿರಿಯ ಸರ್ಕಾರಿ ಅಧಿಕಾರಿ ಜಹೀರ್ ಅನ್ವರ್ ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *