ತಾಯಿ ಅಗಲಿಕೆಯ ನೋವಿನಲ್ಲಿಯೇ ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ನೆರವೇರಿಸಿದ ಮಗ..!

ತಾಯಿ ಅಗಲಿಕೆಯ ನೋವಿನ ನಡುವೆಯೇ ಇಂದು ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ವಿನೋದ್ ನೆರವೇರಿಸಿದ್ದಾರೆ. ಕನ್ನಡದ ಹಿರಿಯ ನಟಿ, ಬೆಳ್ಳಿ ಪರದೆಯಲ್ಲಿ 6 ದಶಕಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಮನಸ್ಸು ಗೆದ್ದಿದ್ದ ನಾಯಕಿ, ಪೋಷಕ ನಟಿಯಾಗಿ, ನೂರಾರು ಪಾತ್ರಗಳಿಗೆ ಜೀವ ತುಂಬಿದ್ದ ನಟಿ ಲೀಲಾವತಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರನೇ ದಿನವಾಗಿದ್ದು, ಹಾಲುತುಪ್ಪ ಕಾರ್ಯವನ್ನ ಇಂದು ಕುಟುಂಬಸ್ಥರು ನೆರವೇರಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳಿಂದ ಹಾಸಿಗೆ ಹಿಡಿದಿದ್ದ ಅವರು ಶುಕ್ರವಾರ ಸಂಜೆ ಇಹಲೋಕದ ಪಯಣ ಮುಗಿಸಿ ಚಿರನಿದ್ರೆಗೆ ಜಾರಿದ್ದರು. ನಿನ್ನೆ ನೆಲಮಂಗಲದ ಸೋಲದೇವನಹಳ್ಳಿಯ ತಮ್ಮ ನೆಚ್ಚಿನ ಕನಸಿನ ತೋಟದ ಮನೆಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆದಿತ್ತು.

ಮೂರನೇ ದಿನದ ಹಾಲು ತುಪ್ಪ ಕಾರ್ಯವನ್ನ ಇಂದು ಮದ್ಯಾಹ್ನ ಕುಟುಂಬದ ಸದಸ್ಯರು, ಅಪ್ತರು, ಮತ್ತು ಸೋಲದೇವನಹಳ್ಳಿಯ ಸುತ್ತಮುತ್ತಲಿನ ಜನರು ಸೇರಿ ಮಾಡಿದ್ದಾರೆ. ಅಗಲಿದ ತಾಯಿಗೆ ಮಗ ವಿನೋದ್ ರಾಜ್ ಭಾರವಾದ ಹೃದಯದಲ್ಲೇ ಹಾಲು ತುಪ್ಪ ಹಾಕಿ ತಾಯಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕೇಳಿಕೊಂಡರು. ಲೀಲಾವತಿಯ (Leelavathi) ಸೊಸೆ ಅನು, ಮತ್ತು ಮೊಮ್ಮಗ ಯುವರಾಜ್ (Yuvaraj) ಕೂಡ ಲೀಲಾವತಿಯ ಸಮಾಧಿಗೆ ಪೂಜೆ ಮಾಡಿ ಹಾಲುತುಪ್ಪ ಕಾರ್ಯ ಮಾಡಿದ್ದರು.

Loading

Leave a Reply

Your email address will not be published. Required fields are marked *