ಕ್ಯಾನ್ಸರ್’ನಿಂದ ಬಳಲುತ್ತಿದ್ದ ಜೂನಿಯರ್ ಮೆಹಮೂದ್ ನಿಧನ!

ಬಾಲಿವುಡ್ (Bollywood) ನ ಹೆಸರಾಂತ ಪೋಷಕ ನಟ, ಮೇರಾ ನಾಮ್ ಜೋಕರ್ ಖ್ಯಾತಿಯ ಜೂನಿಯರ್ ಮೆಹಮೂದ್ (Junior Mehmood) ನಿಧನರಾಗಿದ್ದಾರೆ. ಅವರು ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೊಹಮೂದ್ ಇಹಲೋಕ (passed away) ತ್ಯಜಿಸಿದ್ದಾರೆ.

ಐದು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಇವರು, ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 67ರ ವಯಸ್ಸಿನ ಮೊಹಮೂದ್, 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ನಟರ ಪುತ್ರರೇ ಮಾತನಾಡಿದ್ದು, ಮಧ್ಯರಾತ್ರಿ ಮನೆಯಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದೋ ಔರ್ ದೋ ಪಾಂಚ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿರುವ ಇವರ ನಿಧನಕ್ಕೆ ಬಾಲಿವುಡ್ ನ ಸಾಕಷ್ಟು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯ ಸಂಸ್ಕಾರ ಮುಂಬೈ ಸಾಂತಾಕ್ರೂಜ್ ವೆಸ್ಟ್ ನಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ನಡೆಯಲಿದೆ.

Loading

Leave a Reply

Your email address will not be published. Required fields are marked *