ಹ್ಯಾಟ್ರಿಕ್ ಗೆಲುವು ಸಾಧಿಸಿದ ಗುಜರಾತ್ ಜೈಂಟ್ಸ್..!

ತತ 3ನೇ ಪಂದ್ಯದಲ್ಲೂ ‘ಸೂಪರ್‌ 10’ ಮೂಲಕ ಅಬ್ಬರಿಸಿದ ಯುವ ರೈಡರ್‌ ಸೋನು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ಗೆ ಹ್ಯಾಟ್ರಿಕ್‌ ಗೆಲುವು ತಂದುಕೊಟ್ಟಿದ್ದಾರೆ. ಮಂಗಳವಾರ ಯು ಮುಂಬಾ ವಿರುದ್ಧ ಜೈಂಟ್ಸ್‌ಗೆ 39-37 ಅಂಕಗಳಿಂದ ಜಯ ಲಭಿಸಿತು.

ಆರಂಭದಲ್ಲಿ ಜೈಂಟ್ಸ್‌ ಮಿಂಚಿನ ಆಟವಾಡಿದರೂ, ಮೊದಲಾರ್ಧದ ವೇಳೆಗೆ ಮುಂಬಾ 18-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಬಳಿಕ ಪುಟಿದೆದ್ದ ಜೈಂಟ್ಸ್‌ ಅಂಕಗಳ ಅಂತರ ಹೆಚ್ಚಿಸುತ್ತಾ ಸಾಗಿದರೂ, ಒಂದು ಹಂತದಲ್ಲಿ ಇತ್ತಂಡಗಳು 36-36ರಲ್ಲಿ ಸಮಬಲ ಸಾಧಿಸಿದ್ದವು.

ಈ ವೇಳೆ ಸೋನು ಒಂದೇ ರೈಡ್‌ನಲ್ಲಿ 3 ಅಂಕ ಪಡೆದು ಜೈಂಟ್ಸ್‌ ರೋಚಕ ಗೆಲುವಿಗೆ ಕಾರಣರಾದರು. ಸೋನು 16 ರೈಡ್‌ನಲ್ಲಿ 11 ಅಂಕ ಪಡೆದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ರಾಕೇಶ್‌ ಹಾಗೂ ರೋಹಿತ್‌ ಗುಲಿಯಾ ತಲಾ 7 ರೈಡ್‌ ಅಂಕ ಸಂಪಾದಿಸಿದರು. ಗುಮಾನ್‌ ಸಿಂಗ್‌ ಹಾಗೂ ಅಮೀರ್‌ಮೊಹಮದ್‌ ಝಫರ್‌ದಾನೆಶ್‌ ತಲಾ 10 ಅಂಕಗಳನ್ನು ಪಡೆದರೂ ಮುಂಬೈನ ಸತತ 2ನೇ ಜಯದ ಕನಸು ಕೈಗೂಡಲಿಲ್ಲ.

Loading

Leave a Reply

Your email address will not be published. Required fields are marked *