ಮಧುಮೇಹ ಇರುವವರು ಈ ಚಿಯಾ ಬೀಜಗಳನ್ನು ತಿನ್ನಲೇಬಾರದು ಗೊತ್ತಾ!

ಚಿಯಾ ಬೀಜಗಳಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುವ ವಿಚಾರ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಇಲ್ಲದಿದ್ದರೆ ಚಿಯಾ ಬೀಜಗಳನ್ನು ದಿನಕ್ಕೆ 3-4 ಬಾರಿ ಸೇವಿಸಲು ಆರಂಭಿಸಿದರೆ ಅದರಿಂದ ಆರೋಗ್ಯದ ಮೇಲೆ ಎಂತಹ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವುದನ್ನು ಈಗ ತಿಳಿಯೋಣ ಬನ್ನಿ.

ಮಧುಮೇಹ ಉಳ್ಳವರು ಚಿಯಾ ಬೀಜಗಳನ್ನು ಕಡಿಮೆ ತಿನ್ನಬೇಕು:

ಒಂದು ವೇಳೆ ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಲಿದ್ದರೆ ಚಿಯಾ ಬೀಜಗಳನ್ನು ಸ್ವಲ್ಪ ಕಡಿಮೆ ಸೇವಿಸಬೇಕು. ಚಿಯಾ ಬೀಜಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣವೇನೋ ಮಾಡುತ್ತವೆ, ಆದರೆ ನೀವು ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುವಾಗ, ಈ ಬೀಜಗಳು ಅತಿಯಾದ ಉತ್ತೇಜನವನ್ನು ನೀಡುತ್ತವೆ.

ಚಿಯಾ ಬೀಜಗಳು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ : ಇದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳ (fatty acid) ಕಾರಣದಿಂದಾಗಿ, ಇದು ರಕ್ತ ತೆಳುವಾಗುವುದನ್ನು ಕಡಿಮೆ ಮಾಡುತ್ತದೆ. ಆದ್ಧರಿಂದ ಇದು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಉಂಟುಮಾಡಬಹುದು.

ಅಲರ್ಜಿಗಳಿಗೆ ಗುರಿಯಾಗುವ ಸಂಭವ:

ಹೆಚ್ಚು ಚಿಯಾ ಬೀಜಗಳನ್ನು ತಿನ್ನುವುದರಿಂದಾಗಿ, ಇದು ನಮ್ಮ ಆಹಾರದ ಅಲರ್ಜಿಯನ್ನು (Food Allergy) ಉಂಟುಮಾಡಬಹುದು. ಇದರಿಂದ ಹೊಟ್ಟೆ ನೋವು, ಭೇದಿ, ವಾಂತಿ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೆಲವು ಜನರಿಗೆ ಮೈಮೇಲೆ ದದ್ದುಗಳು ಮೂಡಬಹುದು, ಚರ್ಮದಲ್ಲಿ ತುರಿಕೆ, ದೇಹದಲ್ಲಿ ಊತ ಮುಂತಾದ ಚರ್ಮದ ಅಲರ್ಜಿಗಳನ್ನು ಸಹಾ ಉಂಟಾಗಬಹುದು.

Loading

Leave a Reply

Your email address will not be published. Required fields are marked *