ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವ ವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ದಕ್ಷಿಣ ಕರ್ನಾಟಕದವರ ಗುಲಾಮರು ನಾವಲ್ಲ ಎಂದು ಬಿಜೆಪಿ‌ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನರೇಂದ್ರ ‌ಮೋದಿ ನಾಯಕತ್ವ ಇಡೀ ದೇಶದ ಜನರು ಒಪ್ಪಿಕೊಂಡಿದ್ದಾರೆ.  ನರೇಂದ್ರ ‌ಮೋದಿ ದೇಶಕ್ಕೆ ಗ್ಯಾರಂಟಿ ಇರುವುದಿಂದ ಗೆಲುವುವಾಗಿದೆ. ಹೊಂದಾಣಿಕೆ ‌ಇಲ್ಲದ ರಾಜಕಾರಣ, ‌ಹಿಂದುತ್ವ ಅಭಿವೃದ್ಧಿ ಕಾರಣವಾಗಿದೆ ಎಂದರು. ಕುಟುಂಬ ರಾಜಕಾರಣ ಕಿತ್ತು ಹಾಕಬೇಕು. ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ವಂಶವಾದವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ. ಇನ್ನು ಮೇಲೆ ಬದಲಾವಣೆ ಆಗುತ್ತದೆ.

ಲೋಕಸಭೆ ಚುನಾವಣೆ ಬಳಿಕ ಬದಲಾವಣೆ!

ಇನ್ನು ಇದೇ ಸಂದರ್ಭದಲ್ಲಿ ‌ಲೋಕಸಭೆ ಚುನಾವಣೆ ಬಳಿಕ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಭವಿಷ್ಯ ‌ನುಡಿದಿದ್ದಾರೆ. ಪ್ರಾಮಾಣಿಕರು ಹಾಗೂ ಹಿಂದೂ ವಿಚಾರಧಾರೆ ಹೊಂದಿರುವವರು‌ ಆಡಳಿತ ನಡೆಸಬೇಕು ಎಂದರು.

Loading

Leave a Reply

Your email address will not be published. Required fields are marked *