ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡುತ್ತಾರೆ: ಎಂ ಪಿ ರೇಣುಕಾಚಾರ್ಯ

ದಾವಣಗೆರೆ: ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾಗತ್ತೆ. ನಾವು ಯಾವುದೇ ಆಪರೇಷನ್ ಕಮಲ ಮಾಡಲ್ಲ. ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡುತ್ತಾರೆ ಎಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ದಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಚುನಾವಣೆ ಮುಂಚೆ ಘೋಷಣೆಗಳನ್ನ ಮಾಡಿದ್ದರು. ಆದ್ರೆ, ಯಾವುದು ಸರಿಯಾಗಿ ಜಾರಿ ಮಾಡಲಿಲ್ಲ ಇದರಿಂದ ಮಹಿಳೆಯರು ಸೇರಿ ಎಲ್ಲರು ಬೇಸತ್ತು ಹೋಗಿದ್ದಾರೆ.

ಇನ್ನೂ ಸಚಿವ ಜಮೀರ್ ಅಹ್ಮದ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಜಮೀರ್ ಅಹ್ಮದ್ ಒಬ್ಬ ಹುಚ್ಚ ಆತ ಹುಚ್ಚನಂತೆ ಮಾತನಾಡುತ್ತಾನೆ. ಪುಲ್ವಾಮ ಘಟನೆ ಮತ್ತು ನರೇಂದ್ರ ಮೋದಿ ಆಡಳಿತವನ್ನ ಬ್ರಿಟಿಷ್ ರಿಗೆ ಹೋಲಿಕೆ ಮಾಡುತ್ತಾರೆ. ಶಾಸಕ ಬಾಲಕೃಷ್ಣ ಗೆ ನಾಚಿಕೆ ಆಗಬೇಕು, ರಾಜ್ಯದ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾರೆ, ಕೆಲ ಶಾಸಕರು ಇಂಥವರೇ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಶಕ್ತಿ ಯೋಜನೆಗೆ ಬಸ್ ಇಲ್ಲ ಮಹಿಳೆಯಾರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಎಂ ಪಿ ರೇಣುಕಾಚಾರ್ಯ ಕಿಡಿಕಾರಿದರು.

Loading

Leave a Reply

Your email address will not be published. Required fields are marked *