ಪಡಿತರ ಪಡೆಯದ 3.47 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್ದಾರರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಆರು ತಿಂಗಳಿಂದ ರೇಷನ್ ಕಾರ್ಡ್ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಸ್ಥಗಿತಗೊಳಿಸಲು ಆಹಾರ ಇಲಾಖೆ ಮುಂದಾಗಿದೆ. ಈಗಾಗಲೇ ಆರು ತಿಂಗಳಿಂದ ರೇಷನ್ ಪಡೆಯದ ಕಾರ್ಡ್ಗಳ ಮಾಹಿತಿಯನ್ನು ಇಲಾಖೆ ವತಿಯಿಂದ ಸಂಗ್ರಹಿಸಲಾಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮೂಲ ದಾಖಲೆಗಳ ಮಾಹಿತಿ ಸಂಗ್ರಹಿಸಲಾಗಿತ್ತು.ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿಯೇ ಆಧಾರವಾಗಿತ್ತು. ಇನ್ನು ಆರು ತಿಂಗಳಿಂದ ಪಡಿತರ ಏಕೆ ಪಡೆಯುತ್ತಿಲ್ಲ ಎಂದು ಗಮನಿಸಿದರೇ, ಪಡಿತರ ಚೀಟಿದಾರರ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿರುವುದು. ಆರೋಗ್ಯ ಸಂಬಂಧಿ ಸೌಲಭ್ಯ ಪಡೆಯಲು BPL ಕಾರ್ಡ್ ಪಡೆದಿರುವುದು, ಸದ್ಯ ಪಡಿತರ ಚೀಟಿದಾರರು ಮರಣ ಹೊಂದಿರವುದು ಮತ್ತು ಇತರೇ ಕಾರಣಗಳೇ ಆಗಿದೆ.