ಗುಜರಾತ್​ ಟೈಟಾನ್ಸ್​ಗೆ ಟಾಟಾ ಹೇಳಿದ್ದೇಕೆ ಹಾರ್ದಿಕ್ ಪಾಂಡ್ಯ!?

ಮುಂಬೈ ಇಂಡಿಯನ್ಸ್​ಗೆ ಮರಳಲು ಹಾರ್ದಿಕ್​ ಪಾಂಡ್ಯ ಅಪಾರವಾದ ಹಂಬಲ ವ್ಯಕ್ತಪಡಿಸಿದ್ದರಿಂದ ಅವರ ನಿರ್ಧಾರ ಗೌರವಿಸಿದ್ದೇವೆ ಎಂದು ಗುಜರಾತ್​ ಟೈಟಾನ್ಸ್​ ತಂಡದ ನಿರ್ದೇಶಕ ವಿಕ್ರಮ್​ ಸೋಲಂಕಿ ಹೇಳಿದ್ದಾರೆ.

ಮುಂಬೈ ಜತೆಗಿನ ಈ ಭಾವನಾತ್ಮಕ ಸಂಬಂಧದ ಕಾರಣವಲ್ಲದೆ, ವರ್ಗಾವಣೆಯಿಂದಾಗಿ ಸಿಗುವ ಹೆಚ್ಚುವರಿ ಹಣದ ಆಸೆಯಿಂದಲೂ ಹಾರ್ದಿಕ್​ ತವರು ರಾಜ್ಯದ ಗುಜರಾತ್​ ತಂಡವನ್ನು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ, ಮುಂಬೈಗೆ ಮರಳಿರುವ ಹಾರ್ದಿಕ್​ ನಡೆಯನ್ನು ಖ್ಯಾತ ವೀಕ್ಷಕವಿವರಣೆಕಾರ ಆಕಾಶ್​ ಚೋಪ್ರಾ ಟೀಕಿಸಿದ್ದಾರೆ.

‘ಗುಜರಾತ್​ ತಂಡದ ನಾಯಕರಾಗುವ ಸಲುವಾಗಿ ಹಾರ್ದಿಕ್​ ಮುಂಬೈ ತಂಡ ತ್ಯಜಿಸಿದ್ದರು. ಇದೀಗ ರಾಷ್ಟ್ರೀಯ ತಂಡಕ್ಕೂ ನಾಯಕರಾಗಿದ್ದರೂ ಅವರು, ನಾಯಕರಾಗುವ ಖಚಿತತೆ ಇಲ್ಲದೆ ಮುಂಬೈ ತಂಡಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್​ಗೆ ಭಾರತ ತಂಡದ ನಾಯಕರಾಗುವವರು, ಫ್ರಾಂಚೈಸಿ ತಂಡಕ್ಕೆ ನಾಯಕರಲ್ಲ. ಇದರ ಔಚಿತ್ಯ ಅರ್ಥವಾಗುತ್ತಿಲ್ಲ’ ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *