ನನ್ನ ಕೆಲಸ ಏನಿದ್ದರೂ ಉತ್ತಮವಾಗಿ ಬೌಲಿಂಗ್ ಮಾಡುವುದಷ್ಟೇ: ಮೊಹಮ್ಮದ್ ಶಮಿ

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಮೊಹಮ್ಮದ್‌ ಶಮಿ, 2023ರ ವಿಶ್ವಕಪ್‌ ಟೂರ್ನಿಯಲ್ಲಿ ಹಲವು ಅವಿಸ್ಮರಣೀಯ ದಾಖಲೆಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಜಹೀರ್‌ ಖಾನ್‌ ಮತ್ತು ಜಾವಗಲ್‌ ಶ್ರೀನಾಥ್‌ ಅವರಂತಹ ದಿಗ್ಗಜರಿಗೆ ಸಡ್ಡು ಹೊಡೆದು ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡುರು.

ಜಹೀರ್‌ ಖಾನ್ ಮತ್ತು ಜಾವಗಲ್‌ ಶ್ರೀನಾಥ್‌ ವಿರ್ಶವಕಪ್‌ ಅಖಾಡದಲ್ಲಿ ತಲಾ 44 ವಿಕೆಟ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. ಆದರೆ, ಪ್ರಚಂಡ ಪ್ರದರ್ಶನ ನೀಡಿರುವ ಮೊಹಮ್ಮದ್ ಶಮಿ ಆಡಿದ 18 ವಿಶ್ವಕಕಪ್‌ ಪಂದ್ಯಗಳಲ್ಲೇ 55 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ವೇಗವಾಗಿ ವಿಶ್ವಕಪಗ್‌ನಲ್ಲಿ ವಿಕೆಟ್‌ಗಳ ಅರ್ಧಶತಕ ಬಾರಿಸಿದ ದಾಖಲೆಯನ್ನೂ ಬರೆದಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ಎದುರು 57ಕ್ಕೆ 7 ವಿಕೆಟ್‌ ಪಡೆದ ಸಾಧನೆ ಮೆರೆದಿದ್ದರು. ಈ ಮೂಲಕ ಒಡಿಐ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಶ್ರೇಷ್ಠ ಬೌಲಿಂಗ್‌ ಸಾಧನೆಯ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡು. ಇದಕ್ಕೂ ಮೊದಲು ಸ್ಟುವರ್ಟ್‌ ಬಿನ್ನಿ (8ಕ್ಕೆ 6) ಹೆಸರಲ್ಲಿ ಈ ದಾಖಲೆ ಇತ್ತು.

“ನಾನು ದಾಖಲೆಗಳಿಗಾಗಿ ಆಡುವವನಲ್ಲ. ಈ ದಿಗ್ಗಜ ಆಟಗಾರರನ್ನು ಹಿಂದಿಕ್ಕಿದ್ದೇನೆ ಎಂಬ ಸಂಗತಿಯೂ ನನಗೆ ತಿಳಿದಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ 40ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದೇನೆ ಎಂಬುದು ನನ ಗಮನದಲ್ಲಿತ್ತು. ಆದರೆ, ವೈಯಕ್ತಿಕ ಮೈಲುಗಲ್ಲುಗಳ ಬಗ್ಗೆ ನಾನು ಎಂದಿಗೂ ಗಮನ ಕೊಟ್ಟಿರಲಿಲ್ಲ. ನನ್ನ ಕೆಲಸ ಏನಿದ್ದರೂ ಉತ್ತಮವಾಗಿ ಬೌಲಿಂಗ್‌ ಮಾಡುವುದಷ್ಟೇ,” ಎಂದು ಪೂಮಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್‌ ಶಮಿ ತಮ್ಮನ ಮನದಾಳ ತೆರೆದಿಟ್ಟಿದ್ದಾರೆ.

Loading

Leave a Reply

Your email address will not be published. Required fields are marked *