ಮಗಳನ್ನು ಮದುವೆಗೆ ಪೀಡಿಸುತ್ತಿದ್ದ ಪ್ರಿಯಕರನನ್ನು ರಾಡ್ ನಿಂದ ಹೊಡೆದು ಕೊಂದ ಯುವತಿ ತಂದೆ..!

 ಬೆಂಗಳೂರುನಗರದ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್​ ಬಳಿ ಮಗಳ ಪ್ರಿಯಕರನನ್ನು ತಂದೆಯೇ ಕೊಂದು ಹಾಕಿರುವ ಘಟನೆ ನಡೆದಿದೆ. ಡೇವಿಡ್​ ಕೊಲೆಯಾದ ಯುವಕ. ಯವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ. ಆಟೋ ಡ್ರೈವರ್ ಆಗಿದ್ದ ಡೇವಿಡ್, ಮಂಜುನಾಥ್​ ಎಂಬಾತನ ಮಗಳನ್ನ ಪ್ರೀತಿಸ್ತಿದ್ದ. ಮದುವೆ ಮಾಡಿಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ನಿಮ್ಮ ಮಗಳೊಂದಿಗಿನ ಫೋಟೋಗಳನ್ನ ವೈರಲ್​​ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

ಫೋಟೋ ಮತ್ತು ವಿಡಿಯೋ ಇದೆ ಅಂತ ಹೆದರಿಸ್ತಿದ್ದ. ಇದರಿಂದ ಮಗಳ ಮರ್ಯಾದೆ ಹಾಳಾಗುತ್ತೆ ಎಂಬ ನಿರ್ಧಾರಕ್ಕೆ ಬಂದ ತಂದೆ ಮಾತನಾಡುವ ನೆಪದಲ್ಲಿ ಡೇವಿಡ್​​ನನ್ನು ಕರೆದು ರಾಡ್​ನಿಂದ ಹೊಡೆದು, ಚಾಕುವಿನಿಂದ ಇರಿದಿದ್ದಾನೆ. ನಂತರ ಹಾಲೋಬ್ರಿಕ್ಸ್ ಕಲ್ಲುಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಮಂಜುನಾಥ್​​ನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆಡಿದ್ದಾರೆ.

 

Loading

Leave a Reply

Your email address will not be published. Required fields are marked *