ಟೆಲ್ ಅವೀವ್: ಅಕ್ಟೋಬರ್ 7ರಂದು ಹಮಾಸ್ ಉಗ್ರರು (Hamas Terrorist) ಇಸ್ರೇಲ್ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾದ 19 ವರ್ಷದ ಮಹಿಳಾ ಯೋಧೆಯೊಬ್ಬರು (Israel Soldier) ಕೊಲೆಯಾಗಿರುವುದು ಪತ್ತೆಯಾಗಿದೆ. ಇಸ್ರೇಲ್ ರಕ್ಷಣಾ ಪಡೆ ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಕಾರ್ಪೋರಲ್ ನೋವಾ ಮಾರ್ಸಿಯಾನೊ (19) ಅವರ ಮೃತದೇಹವು ಗಾಜಾಪಟ್ಟಿಯಲ್ಲಿರುವ ಶಿಫಾ ಹಾಸ್ಪಿಟಲ್ ಪಕ್ಕದಲ್ಲಿ ಪತ್ತೆಯಾಗಿದೆ. ಹಮಾಸ್ ಉಗ್ರರ ಗುಂಪು ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಶಾಲೆಗಳು, ಆಸ್ಪತ್ರೆಗಳಂತಹ ನಾಗರಿಕ ಕಟ್ಟಡಗಳನ್ನು ಹಮಾಸ್ ಬಳಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್ ರಕ್ಷಣಾ ಪಡೆ (IDF) ಅನೇಕ ವೀಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ನಡುವೆಯೇ ಇಸ್ರೇಲ್ ಮಹಿಳಾ ಸೈನಿಕರೊಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನೋವಾ ಮಾರ್ಸಿಯಾನೊ ಅವರನ್ನ ಅಕ್ಟೋಬರ್ 7ರಂದು ಅಪಹರಿಸಿ ಹಮಾಸ್ ಉಗ್ರರು ಹತ್ಯೆಗೈದಿದ್ದಾರೆ. ಆಕೆಯ ದೇಹವನ್ನು ಗಾಜಾದ ಶಿಫಾ ಆಸ್ಪತ್ರೆ ಸಮೀಪದಲ್ಲಿ ಬಿಸಾಡಿದ್ದಾರೆ. ಇದನ್ನು ಇಸ್ರೇನ್ ಸೇನೆ ಪತ್ತೆಮಾಡಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ. ಅಲ್ಲದೇ ಇಂದು ಗಾಜಾ ಆಸ್ಪತ್ರೆಯ ಸಮೀಪದಲ್ಲೇ ಒತ್ತಾಯಾಳಾಗಿದ್ದ 5 ಮಕ್ಕಳ ತಾಯಿ ಹಮಾಸ್ ಉಗ್ರರಿಂದ ಕೊಲ್ಲಲ್ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.