ಸಾಮಾಜಿಕ ಜಾಲತಾಣಗಳಲ್ಲಿ ಲಾಂಗ್ ಮಚ್ಚು ಹಿಡಿದು ರೀಲ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ತಾಲೂಕಿನ ನರಸಾಪುರದಲ್ಲಿ ಬಂಧಿಸಲಾಗಿದೆ. ನರಸಾಪುರದ ವೇಣು ಮತ್ತು ಪವನ್ ಕುಮಾರ್ ಎಂಬುವವರು ಲಾಂಗ್ ಮತ್ತು ಮಚ್ಚು ಹಿಡಿದು ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದರು. ಹೀಗಾಗಿ ಅಕ್ರಮ ಶಸ್ತಾಸ್ತ್ರ ಕಾಯ್ದೆ ಪ್ರಕರಣದಡಿಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.