ಚಲಿಸುತ್ತಿದ್ದ ರೈಲಿಗೆ ಬೆಂಕಿ: ಬೆಂಕಿ ಜ್ವಾಲೆಗೆ ಸುಟ್ಟು ಕರಕಲಾದ ಬೋಗಿಗಳು

ಲಕ್ನೋ: ದೆಹಲಿ-ದರ್ಭಾಂಗ (Delhi-Darbhanga Train) ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಇಟಾವಾ ಬಳಿ 02570 ದೆಹಲಿ-ದರ್ಬಂಗಾ ಕ್ಲೋನ್ ಸ್ಪೆಷಲ್‌ನ ಎಸ್1 (ಸ್ಲೀಪರ್) ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ರೈಲು ಸರಾಯ್ ಭೋಪಾಟ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಹೊಗೆ ಕಾಣಿಸಿಕೊಂಡು ಈ ಅವಘಡ ಸಂಭವಿಸಿತು.

ಕೋಚ್‌ಗಳಲ್ಲಿ ಒಂದಕ್ಕೆ ಭಾರಿ ಬೆಂಕಿ ಆವರಿಸಿದ ವೇಳೆ ಪ್ರಯಾಣಿಕರು ಮತ್ತು ಅಧಿಕಾರಿಗಳು ಸುತ್ತಲೂ ನಿಂತಿದ್ದರು. ಈ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಛತ್ ಹಬ್ಬದ ಕಾರಣ ಬಿಹಾರಕ್ಕೆ ಹೋಗುವ ಎಲ್ಲಾ ರೈಲುಗಳು ತುಂಬಿ ತುಳುಕುತ್ತಿವೆ. ಗಾಯಗೊಂಡವರನ್ನು ಇಟಾವಾದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *