ನಾಲ್ವರ ಹಂತಕನಿಗೆ ಕೊನೆಗೂ ಅರೆಸ್ಟ್, ಆತ ಭದ್ರತಾ ಸಿಬ್ಬಂದಿ

ಉಡುಪಿ: ಉಡುಪಿ ಸಂತೆಕಟ್ಟೆ ಸಮೀಪ ನೇಜಾರಿ ತ್ರಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈ ಹತ್ಯೆಗೆ ಭಗ್ನ ಪ್ರೇಮ ಕಾರಣ ಎನ್ನಲಾಗಿದೆ.

ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಉಡುಪಿಯಲ್ಲಿ ಕೊಲೆ ಮಾಡಿದ ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರವೀಣ್ ಅರುಣ್ ಸಿಐಎಸ್ಎಫ್‌ ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ಯಾಜ್ ಪರಿಚಯವಾಗಿ ಇಬ್ಬರು ಸ್ವಲ್ಪ ಸಮಯ ಆತ್ಮೀಯವಾಗಿದ್ದರು. ಆದರೆ ನಂತರ ಅಯಾಜ್ ಆತನಿಂದ ದೂರವಾಗಿದ್ದಳು. ಇದರಿಂದ ಕುಪಿತನಾಗಿ ಭಗ್ನಪ್ರೇಮಿಯಾಗಿದ್ದ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಉಡುಪಿಯ ಈ ಹತ್ಯಾಕಾಂಡ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಆರೋಪಿ ಉಡುಪಿಗೆ ಬಂದಿದ್ದು ಕೆಲ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಮತ್ತು ಅಯ್ಯಾಜ್ ತಂದೆ ನೀಡಿದ ಸುಳಿವು ಪೊಲೀಸರಿಗೆ ಆರೋಪಿಯನ್ನು ಪತ್ತೆಹಚ್ಚಲು ನೆರವಾಗಿದೆ ಎನ್ನಲಾಗಿದೆ.

ಒಂದೇ ಕುಟುಂಬದ ನಾಲ್ಕು ಮಂದಿ ಯನ್ನು ಈತ ಹತ್ಯೆ ಮಾಡಿದ್ದ ಎನ್ನಲಾಗಿದೆ.

Loading

Leave a Reply

Your email address will not be published. Required fields are marked *