ಬೆಂಗಳೂರ:- ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ಅವರನ್ನು ಮಾಜಿ ಸಚಿವರಾದ ಸಿ.ಟಿ ರವಿ ಅವರು ಭೇಟಿ ಮಾಡಿದರು.
ಬೆಂಗಳೂರಿನ ಬಿವೈ ವಿಜಯೇಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ, ಶಾಲು ಹೊದಿಸಿ ಸಿಟಿ ರವಿ ಅಭಿನಂದಿಸಿದ್ದಾರೆ. ಇದೇ ವೇಳೆ ರಾಜಕೀಯ ಸಂಬಂಧ ಕೆಲವು ಸಮಯ ಚರ್ಚೆ ನಡೆಸಿದರು.
ಇನ್ನೂ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಹಿನ್ನೆಲೆ, ಸಿಟಿ ರವಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿತ್ತು. ಇದೀಗ ಬಿವೈ ವಿಜಯೇಂದ್ರರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.