ಹಾಸನಾಂಬಾ ದರ್ಶನದಿಂದ ಇತಿಹಾಸದಲ್ಲೇ ಅತೀ ಹೆಚ್ಚು ಆದಾಯ ಸಂಗ್ರಹ

ಹಾಸನ: ವರ್ಷಕ್ಕೆ ಒಂದು ಬಾರಿ ದರ್ಶನ ನೀಡುವ ಹಾಸನಾಂಬೆಯ ಜಾತ್ರಾ ಮಹೋತ್ಸವ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ದಾಖಲೆಯ ಆದಾಯ ಗಳಿಸಿದೆ. 9 ದಿನಗಳ ದರ್ಶನದಲ್ಲಿ ಒಟ್ಟು 4,56,22,580 ರೂ. ಸಂಗ್ರಹವಾಗಿದೆ. ವಿಶೇಷ ದರ್ಶನದ ಪಾಸ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಕೋಟಿ ಕೋಟಿ ಆದಾಯ ಗಳಿಸಿದೆ. ನ.3ರಿಂದ ಪ್ರಾರಂಭವಾಗಿ ನ.11ರ ಮಧ್ಯಾಹ್ನ 2ಗಂಟೆಯವರೆಗೆ ಒಟ್ಟು 4,56,22,580 ರೂ. ಆದಾಯ ಬಂದಿದೆ.

ಸಾವಿರ ರೂ. ಟಿಕೆಟ್ ಮಾರಾಟದಿಂದ 2,30,91,000 ರೂ. ಸಂಗ್ರಹವಾಗಿದ್ದು, 300 ರೂ. ಟಿಕೆಟ್ ಮಾರಾಟದಿಂದ 1,79,65,500 ರೂ. ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ ಕೂಡ 45,66,080 ಹಣ ಸಂಗ್ರಹವಾಗಿದ್ದು, ಒಟ್ಟು 4,56,22,580 ರೂ. ಆದಾಯವನ್ನು ಹಾಸನಾಂಬ ದೇವಾಲಯ ಗಳಿಸಿದೆ. ಹಾಸನಾಂಬೆ ದರ್ಶನೋತ್ಸವ ಇತಿಹಾಸದಲ್ಲೇ ಅತಿ ಹೆಚ್ಚಿನ ಆದಾಯ ಗಳಿಸಿದ್ದು, ಇನ್ನೂ ಮೂರು ದಿನ ಬಾಕಿ ಇರುವಾಗಲೇ ಕೋಟಿ ಕೋಟಿ ಆದಾಯ ಗಳಿಸಿದೆ.

Loading

Leave a Reply

Your email address will not be published. Required fields are marked *