ರಾಯಚೂರು:- ಪ್ರತಿಭಟನೆ ಕಾರರು ಖಾಕಿಗೆ ಮುಗಿಬಿದ್ದು ತರಾಟೆಗೆ ತೆಗೆದುಕೊಂಡ ಘಟನೆ ಲಿಂಗಸೂರು ತಾಲೂಕಿನ ಹಟ್ಟಿ ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಗೆ ಪೊಲೀಸ್ ಸ್ಟೇಷನ್ ಆವರಣದಲ್ಲಿ ಜರುಗಿದೆ. ಲ್ಯಾಬ್ ಟೆಕ್ನಿಷಿಯನ್ ಮಂಜುಳಾ ಕೊಲೆ ಕೇಸ್ ಗೆ ಆತ್ಮಹತ್ಯ ಎಂದು ಎಫ್ಐಆರ್ ದಾಖಲಿಸಿದ್ದು, ಬೆಳ್ಳಂ ಬೆಳಗ್ಗೆ ಹಟ್ಟಿ ಪಟ್ಟಣದಲ್ಲಿ 40 ವರ್ಷದ ಲ್ಯಾಬ್ ಟೆಕ್ನಿಷಿಯನ್ ಮಂಜುಳಾ ದೇಹ ಹೊತ್ತಿ ಉರಿದಿದೆ. ಪಟ್ಟಣದ ಗುಂಡುರಾವ್ ಕಾಲೋನಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮಂಜುಳಾ ಶವ ಪತ್ತೆಯಾಗಿತ್ತು. ಕೊಲೆಯಾಗಿದ್ದ ಕೇಸಿಗೆ ಆತ್ಮಹತ್ಯೆ ಎಂದು ಎಫ್ ಆರ್ ಮಾಡಿಕೊಂಡಿದ್ದ ತನಿಖಾಧಿಕಾರಿ CPI ಹೊಸಕೆರಪ್ಪ ಗೆ ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡಿದ್ದಾರೆ. ಕೊಲೆಯಾಗಿ ಹದಿನೈದು ದಿನ ಕಳೆದರೂ ಆರೋಪಿಗಳು ಪತ್ತೆ ಇಲ್ಲ. ನೀವು ಸುಳ್ಳು ಹೇಳುತ್ತೀರಿ ನಿಮ್ಮ ಮೇಲೆ ನಂಬಿಕೆ ಇಲ್ಲ ಆರೋಪಿಗಳ ಜೊತೆ ಶಾಮೀಲಾಗಿದ್ದೀರಿ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ.