ಹಳೆ ವೈಷಮ್ಯದಿಂದ ಮಾರಕಾಸ್ತ್ರಗಳಿಂದ ರೌಡಿ ಕೊಲೆ

ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ರೌಡಿ ಕೊಲೆ ನಡೆದಿರುವ ಘಟನೆ ಜರುಗಿದೆ. ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೌಡಿ ಸಹದೇವನನ್ನು (32) ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಸಹದೇವ್, ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ಚಹಾ ಕುಡಿಯಲು ಅಂಗಡಿಯೊಂದಕ್ಕೆ ಬಂದಿದ್ದ. ಇದೇ ಸಂದರ್ಭದಲ್ಲಿ ಮೂರು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಸಹದೇವ್ ಆರೋಪಿಯಾಗಿದ್ದ. ಕೋಣನಕುಂಟೆ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿತ್ತು’ ಎಂದು ತಿಳಿಸಿವೆ. ‘ಸ್ಥಳೀಯ ಪರಿಚಯಸ್ಥರ ಜೊತೆ ಸಹದೇವ್ ಜಗಳ ಮಾಡಿದ್ದನೆಂಬ ಮಾಹಿತಿಯಿದೆ. ಇದೇ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ಇದೆ’ ಎಂದು ಹೇಳಿವೆ.

Loading

Leave a Reply

Your email address will not be published. Required fields are marked *