FDA ಅಕ್ರಮ: ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ – ಪ್ರಿಯಾಂಕ್‌ ಖರ್ಗೆ

ಬೆಂಗಳೂರು;- FDA ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ಗೆ ಇದೆ ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಿರುವ ಆರೋಪಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇಡೀ ಸರ್ಕಾರ ಹಗರಣದ ತನಿಖೆಗೆ ಬೆಂಬಲವಾಗಿ ನಿಂತಿದೆ. ನಾವು ಪರೀಕ್ಷೆ ನಡೆಯುವಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. 4 ದಿನದಲ್ಲಿ 20ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ. ಬಿಜೆಪಿ ಸರಕಾರವಿದ್ದಾಗ ಗೃಹ ಸಚಿವರೇ ಪಿಎಸ್‌ಐ ಹಗರಣದ ಮುಖ್ಯ ಆರೋಪಿ ಮನೆಗೆ ಹೋಗಿ ಕಾಜು- ಬದಾಮ್‌ ತಿಂದು ಬಂದಂತೆ ನಾವಂತೂ ತಿಂದಿಲ್ಲ.

ಅಕ್ರಮದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಮುಖ್ಯ ಆರೋಪಿ ಆರ್‌.ಡಿ.ಪಾಟೀಲ್‌ ನನ್ನು ಹಿಡಿಯುತ್ತೇವೆ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯದೆ ವಾಸ್ತವ ಅರಿತು ಮಾತನಾಡಲಿ. ವಿಜಯೇಂದ್ರ ಸರಿಯಾಗಿ ಹೋಮ್‌ ವರ್ಕ್‌ ಮಾಡಿಕೊಂಡು ಬಂದು ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.

Loading

Leave a Reply

Your email address will not be published. Required fields are marked *