103 ವರ್ಷದ ಶತಾಯುಷಿ ಗೌಡರ ಕಮಲಮ್ಮ ಮತದಾನ

ಹದೇವಪುರ: ಈ ಬಾರಿ ಚುನಾವಣೆಯಲ್ಲಿ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಮಾಡಿಕೊಟ್ಟಿದ್ದರು ಕೂಡ, ಕೆಲವು ಶತಾಯುಷಿಗಳು ಮತಗಟ್ಟೆಗೆ ಬಂದು, ಮತದಾನ ಮಾಡಿದ್ದಾರೆ. ಮಹದೇವಪುರದ, ಮಂಡೂರಿನ ಶತಾಯುಷಿ ಗೌಡರ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಆಗಮಿಸಿ, ಮತದಾನ ಮಾಡಿದ್ದಾರೆ.

 

ಮತಗಟ್ಟೆಯಲ್ಲೆ ಬಂದು ಮತದಾನ ಮಾಡಬೇಕೆಂದು ಇಚ್ಚೆ ಪಟ್ಟ ಶತಾಯುಷಿ ಕಮಲಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಅಲ್ಲದೇ, ತಾನು ಗಟ್ಟಿಮುಟ್ಟಾಗಿದ್ದೇನೆ, ನನಗೆ ಮನೆಯಲ್ಲೇ ಕುಳಿತು ಓಟ್ ಮಾಡುವ ಅವಶ್ಯಕತೆ ಇಲ್ಲ. ನಾನು ಮತಗಟ್ಟೆಗೇ ಬಂದು ಮತ ಚಲಾಯಿಸುತ್ತೇನೆ ಎಂದು ಹೇಳಿ, ಮತ ಚಲಾಯಿಸಿದ್ದಾರೆ.ಶತಾಯುಷಿ ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು.ಮಕ್ಕಳಾದ ಶ್ರೀನಿವಾಸ್ ಗೌಡ ರು,ವೆಂಕಟೇಗೌಡ, ಮುಮ್ಮಗ ಕಶ್ವಿನ್ ಗೌಡ ಇದ್ದರು

Loading

Leave a Reply

Your email address will not be published. Required fields are marked *